Advertisement

ಹಿಂಸಾ ಕೃತ್ಯ ಹತ್ತಿಕ್ಕುವ ಕೆಲಸವಾಗಲಿ: ವಿರೂಪಾಕ್ಷಪ್ಪ

03:19 PM Jul 05, 2022 | Team Udayavani |

ಸಿಂಧನೂರು: ವೋಟ್‌ ಬ್ಯಾಂಕ್‌, ಸ್ವಾರ್ಥದ ರಾಜಕಾರಣಕ್ಕೆ ಹಿಂಸಾ ಕೃತ್ಯವನ್ನು ಬೆಂಬಲಿಸುವುದು ಪರಮ ಅನ್ಯಾಯ. ಭಾರತೀಯರಾದ ಪ್ರತಿಯೊಬ್ಬರು ಟೇಲರ್‌ ಕನ್ಹಯ್ಯಲಾಲ್‌ ಹತ್ಯೆಯನ್ನು ಖಂಡಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

Advertisement

ನಗರದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನಿಂದ ಕನ್ಹಯ್ಯಲಾಲ್‌ ಹತ್ಯೆ ಖಂಡಿಸಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಭಾರತ ಸಾವಿರಾರು ವರ್ಷಗಳ ಇತಿಹಾಸ ಇರುವ ದೇಶ. ಇಂತಹ ನಾಡನ್ನು 50-60 ವರ್ಷಗಳ ಕಾಲ ಆಳ್ವಿಕೆ ಮಾಡಿದವರು ಮಾಡಿದ ಒಲೈಕೆ ರಾಜಕಾರಣವೇ ಇಂದಿನ ಸಮಸ್ಯೆಗೆ ಕಾರಣ. ಯಾರೇ ಹಿಂಸಾ ಕೃತ್ಯ ಎಸಗಿದರೂ ಅದನ್ನು ಖಂಡಿಸುವ ಕೆಲಸವಾಗಬೇಕು. ನಾಡಿನಲ್ಲಿ ಹಿಂದೂಗಳ ಹತ್ಯೆ ಎಸಗಿದವರ್ಯಾರು? ಅರಬ್‌ ರಾಷ್ಟ್ರ, ಪಾಕಿಸ್ತಾನದಲ್ಲಿ ಹುಟ್ಟಿದವರಲ್ಲ. ನಮ್ಮ ನಾಡಿನಲ್ಲೇ ಹುಟ್ಟಿದವರು. ಆದರೆ, ಇಂತಹ ದುಷ್ಕೃತ್ಯ ಎಸಗುವವರನ್ನು ಬೆಳೆಸಿದ ಕೀರ್ತಿ ವಿರೋಧ ಪಕ್ಷಕ್ಕೆ ಸಲ್ಲುತ್ತದೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಪಕ್ಷಾಪಾತಿ: ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದೇಶದ್ರೋಹದ ಕೃತ್ಯದಲ್ಲಿ ತೊಡಗಿದ್ದವರನ್ನು ಬಿಡುಗಡೆ ಮಾಡಿ, ಅವರ ಕೇಸ್‌ಗಳನ್ನು ರದ್ದುಪಡಿಸಿ ನಾಡಿಗೆ ದ್ರೋಹ ಬಗೆದರು. ಹಿಜಾಬ್‌ ಸಂದರ್ಭದಲ್ಲಿ ಹೈಕೋರ್ಟ್‌ ನೀಡಿದ ತೀರ್ಪನ್ನು ಗೌರವಿಸದವರನ್ನು ನೋಡಿದ್ದೇವೆ. ಸಿಂಧನೂರಿನಲ್ಲೂ ಸಣ್ಣ-ಪುಟ್ಟ ಜಾತಿಗಳವರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ. ಅಂತಹ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದರೆ, ನ್ಯಾಯದ ಪರವಾಗಿ ನಿಲ್ಲುವುದಕ್ಕೆ ನಾನು ಹಿಂದೇಟು ಹಾಕುವುದಿಲ್ಲ. ರಕ್ಷಣೆಗೆ ನಾನು ಸದಾ ಸಿದ್ಧ ಎಂದರು.

ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರೂಪಾಪುರ ಮತ್ತು ಹಿಂದೂ ಸಂಘಟನೆ ಉತ್ತರ ಪ್ರಾಂತ ಮುಖ್ಯಸ್ಥ ಶ್ರೀಕಾಂತ್‌ ಹೊಸಕೇರಾ ಮಾತನಾಡಿದರು. ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೊಲ್ಲಾಶೇಷಗಿರಿರಾವ್‌, ಮುಖಂಡರಾದ ಸರ್ವೇಶ್ವರರಾವ್‌, ಎನ್‌.ಶಿವನಗೌಡ ಗೋರೆಬಾಳ, ಮಧ್ವರಾಜ್‌ ಆಚಾರ್‌, ರಾಜೇಶ ಹಿರೇಮಠ, ಪರಮೇಶ್ವರಪ್ಪ, ದೇವೇಂದ್ರಪ್ಪ ಯಾಪಲಪರ್ವಿ, ಪೂಜಪ್ಪ ಪೂಜಾರಿ, ವೆಂಕನಗೌಡ ಮಲ್ಕಾಪುರ, ಪ್ರಹ್ಲಾದ್‌ ಕೆಂಗಲ್‌, ಜಿಪಂ ಮಾಜಿ ಸದಸ್ಯೆ ಆದಿಮನೆ ವೀರಲಕ್ಷ್ಮೀ, ಪ್ರೇಮಾ ಸಿದ್ದಾಂತಿಮಠ, ಮಮತಾ ಹಿರೇಮಠ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ನಿರುಪಾದೆಪ್ಪ ಜೋಳದರಾಶಿ, ಸಿದ್ದು ಹೂಗಾರ್‌, ಸಂಗನಗೌಡ ದೇವರಗುಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next