Advertisement

ವರ್ಷ ಕಳೆದರೂ ಪ್ರಾರಂಭವಾಗದ ಕಾಮಗಾರಿ

11:28 AM Feb 22, 2019 | Team Udayavani |

ರೋಣ: ತಾಲೂಕಿನ ಹೊಳೆಆಲೂರ ಮಾರ್ಗವಾಗಿ ಬದಾಮಿ ರಸ್ತೆಯ ಮಧ್ಯದಲ್ಲಿರುವ ಮಲಪ್ರಭಾ ನದಿಗೆ ಕರ್ನಾಟಕ ಸರ್ಕಾರ ಮತ್ತು ಸಣ್ಣ ನೀರಾವರಿ ಇಲಾಖೆಯ 2017-18ನೇ ಸಾಲಿನ ಅನುದಾನದಡಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಅಡ್ಡವಾಗಿ ಬ್ರೀಜ್‌ ಕಮ್‌ ಬ್ಯಾರೇಜ್‌ ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಿ ವರ್ಷ ಕಳೆದಿದೆ. ಆದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಮಳೆಗಾಲ ಸುರುವಾದರೆ ಮಲಪ್ರಭ ನದಿ ದಡದಲ್ಲಿ ವಾಸಿಸುವ ಸಂತ್ರಸ್ಥರಿಗೆ ತೀವ್ರ ತೊಂದರೆಯಾಗುತ್ತದೆ.

Advertisement

2018 ಫೆ. 26ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದಾಗ ಕಾಮಗಾರಿ ಟೆಂಡರ್‌ ಪ್ರಕಿಯೆ ಮುಗಿಯದಿದ್ದರೂ ಅಂದಿನ ನರಗುಂದ ಮತಕ್ಷೇತ್ರದ ಶಾಸಕ ಬಿ.ಆರ್‌. ಯಾವಗಲ್‌ ತರಾತುರಿಯಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಬೃಹತ್‌ ಸಮಾರಂಭ ಮಾಡಿದ್ದರು. ಆದರೆ ಭೂಮಿಪೂಜೆ ನೆರವೇರಿಸಿ ವರ್ಷ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ
ತೀವ್ರ ತೊಂದರೆಯಾಗಿದೆ.

ರೈಲ್ವೆ ಪ್ರಯಾಣಿಕರ ಪರದಾಟ
ಹೊಳೆಆಲೂರ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಇರುವುದರಿಂದ ಇಲ್ಲಿ ವ್ಯಾಪಾರ ವಹಿವಾಟ ಚೆನ್ನಾಗಿ ನಡೆಯುತ್ತದೆ. ಅಲ್ಲದೆ ಇಲ್ಲಿ ಕೃಷಿ ಉತ್ಪನ ಮಾರುಕಟ್ಟೆ ತಾಲೂಕು ಕೇಂದ್ರ ಕಚೇರಿಯೂ ಇಲ್ಲಿ ಇರುವುದರಿಂದ ಸುತ್ತಮುತ್ತಲಿನ ಜನ ಮತ್ತು ವ್ಯಾಪಾರಸ್ಥರು ಈ ಮಾರ್ಗವಾಗಿ ರೈಲ್ವೆ ಪ್ರಯಾಣ ಮಾಡುತ್ತಾರೆ. ಆದರೆ ಕೆಲವು ಹಳ್ಳಿಯ ಜನರು ಈ ಮಲಪ್ರಭ ನದಿಯನ್ನು ದಾಟಲಾಗದೆ ದೂರದ ಬದಾಮಿ ಅಥವಾ ಕೆರೂರದಿಂದ ಪ್ರಯಾಣ ಬೆಳೆಸುವ ಮೂಲಕ ಪರದಾಡುತ್ತಾರೆ. ಇದಲ್ಲದೆ ಮಳೆಗಾಲ ಬಂತು ಎಂದರೆ ಸಾಕು, ಈ ನದಿ ಉಕ್ಕಿ ಹರಿಯುತ್ತದೆ. ಇದರಿಂದ ಈ ರಸ್ತೆ ದಾಟವುದು ಅವಶ್ಯವಿರುವ ಪ್ರಯಾಣಿಕರು ಅಪಾಯದ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಾರೆ. ಇದರಿಂದ ಇಲ್ಲಿನ ಜನರಿಗೆ ಬ್ಯಾರೇಜ್‌ ನಿರ್ಮಾಣವಾಗುವರೆಗೆ ಸಮಸ್ಯೆ ಜೊತೆಗೆ ಅಪಾಯ ತಪ್ಪಿದ.

ಕಾಮಗಾರಿಯನ್ನು ಪ್ರಾರಂಭ ಮಾಡಬೇಕು ಎನ್ನುವಷ್ಟರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಂತು. ಚುನಾವಣಾ ನೀತಿ ಸಹಿಂತೆ ಇರುವುದರಿಂದ ಟೆಂಡರ್‌ ಹಂತ ಮುಗಿಯದ ಕಾರಣ ಕಾಮಗಾರಿ ಪ್ರಾರಂಭ ಮಾಡಲು ಆಗಲಿಲ್ಲ. ಅಲ್ಲದೆ ಈಗ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಇಷ್ಟು ದಿನ ಗುತ್ತಿಗೆದಾರ ಬೇರೆ ಕೆಲಸದಲ್ಲಿ ತೊಡಗಿದ್ದರಿಂದ ಕಾಮಗಾರಿ ಪ್ರಾರಂಭ ಮಾಡಲು ಆಗಲಿಲ್ಲ. ಸದ್ಯ ನದಿಯಲ್ಲಿ ನೀರು ಇದೆ. ಕಾಲಿಯಾದ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡುತ್ತೇವೆ.
 ಗಣಪತಿಸಿಂಗ್‌,
ಗದಗ ಸಣ್ಣ ನೀರಾವರಿ ಇಲಾಖೆ ಅಧಿಕಾರಿ

ಯಚ್ಚರಗೌಡ ಗೋವಿಂದಗೌಡ್ರ 

Advertisement
Advertisement

Udayavani is now on Telegram. Click here to join our channel and stay updated with the latest news.

Next