Advertisement
ನಗರದ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಭೆಗೆ ಬರುವಾಗ ಸಂಪೂರ್ಣ ಮಾಹಿತಿ ಇಟ್ಟುಕೊಂಡು ಬರಬೇಕು. ಬೆರಳ ತುದಿಯಲ್ಲಿ ಮಾಹಿತಿ ಇರ ಬೇಕು. ಸಭೆಗೆ ಬಂದು ಮಾಹಿತಿ ಇಲ್ಲ ಎಂದು ಹೇಳುವುದು ನಾಚಿಕೆಗೇಡು. ಸರ್ಕಾರ ಬಹಳ ಕಾರ್ಯ ಕ್ರಮ ಜಾರಿಗೆ ತಂದಿದೆ.
Related Articles
Advertisement
ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆ ಇಲ್ಲ: ಮುಖ್ಯಮಂತ್ರಿಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯ ಕೊರತೆ ಇಲ್ಲ. ಮೊದಲು ಚುನಾವಣೆ ಘೋಷಣೆಯಾಗಲಿ, ಆನಂತರ ಅಭ್ಯರ್ಥಿ ಹೆಸರು ಪ್ರಕಟಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು. ರೈತರಿಗೂ ವೇತನ ಆಯೋಗ ರಚಿಸುವಂತೆ ಮನವಿ: ಸರ್ಕಾರಿ ನೌಕರರಿಗೆ ರಚಿಸಿರುವಂತೆ ರೈತರಿಗೂ ವೇತನ ಆಯೋಗ ರಚಿಸಬೇಕೆಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ನಗರದ ಟಿ.ಕೆ. ಲೇಔಟ್‌ನಲ್ಲಿರುವ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಸರ್ಕಾರ ರೈತರ ಪರ ಬಜೆಟ್ ಮಂಡಿಸಬೇಕು. 25 ಸಾವಿರ ಕೋಟಿ ಅನುದಾನವನ್ನು ರೈತರಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರ ಪರವಾದ ಯೋಜನೆಗಳನ್ನು ಜಾರಿ ಮಾಡಬೇಕು. ಉದ್ಯಮಿಗಳ ಮೇಲೆ ಈ ಬಾರಿ ಹೆಚ್ಚಿನ ತೆರಿಗೆವಿಧಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ. ಮಸೀದಿಯಲ್ಲಿ ಚುನಾವಣೆ ನಡೆಸಬೇಡಿ: ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಗರದ ಮುಸ್ಲಿಂ ಸಮುದಾಯದ ಮುಖಂಡರು ಮಸೀದಿಗಳಲ್ಲಿ ಚುನಾವಣೆ ನಡೆಸದಂತೆ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಒಂದು ವೇಳೆ ಮಸೀದಿ ಗಳಲ್ಲಿ ಚುನಾವಣೆ ನಡೆದರೆ ಧಾರ್ಮಿಕ ಪುಣ್ಯ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಕಳೆದು ಕೊಂಡು ರಾಜಕೀಯ ಮನೋಭಾವ ಉಂಟಾಗುತ್ತದೆ. ಮಸೀದಿಗಳಲ್ಲಿ ಚುನಾವಣೆ ನಡೆಸುವ ಹುನ್ನಾರದ ಹಿಂದೆ ಸಚಿವ ತನ್ವೀರ್ ಸೇs… ಕೈವಾಡವಿದೆ. ಹಾಗಾಗಿ ತಾವು ಅವರ ಮನವೊಲಿಸಬೇಕು ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು. ಹಿಂದೆ ಸಚಿವರಾಗಿ, ಉಪ ಮುಖ್ಯ ಮಂತ್ರಿಯಾಗಿದ್ದಾಗ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ತೋರದ ಈಶ್ವರಪ್ಪ ಅವರಿಗೆ ಅಧಿಕಾರವಿಲ್ಲದಾಗ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ನಾನು ಅಹಿಂದ ವರ್ಗಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರೆ, ಈಶ್ವರಪ್ಪ ಅಲ್ಪ ಸಂಖ್ಯಾತರನ್ನು ಬಿಟ್ಟು ಬರೀ ಹಿಂದ ಹಿಡಿದುಕೊಂಡು ಹೊರಟಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ