Advertisement

ಬದು ನಿರ್ಮಾಣ ಕಾರ್ಯ ಪರಿಶೀಲನೆ

09:58 AM Jun 02, 2020 | Suhan S |

ಶಿರೂರು: ಬೆನಕಟ್ಟಿಯಲ್ಲಿ ಗ್ರಾಪಂವತಿಯಿಂದ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳಲ್ಲಿ ನಡೆಯುತ್ತಿರುವ ಮಣ್ಣಿನ ಬದು ನಿರ್ಮಾಣ ಹಾಗೂ ಅರಣ್ಯ ಪ್ರದೇಶದಲ್ಲಿ ಸಸಿ ನೆಡುವ ಕಾಮಗಾರಿಯನ್ನು ತಾಪಂ ಇಒ ಎನ್‌.ವೈ. ಬಸರಿಗಿಡದ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕೃಷಿ ಇಲಾಖೆ ವತಿಯಿಂದ ಸದ್ಯ ಗ್ರಾಮದ ಇಬ್ಬರು ರೈತರ ಜಮೀನುಗಳಲ್ಲಿ ಮಣ್ಣಿನ ಬದು ನಿರ್ಮಾಣ ಕಾರ್ಯ ನಡೆದಿದೆ. 35 ಜನ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಅರಣ್ಯ ಪ್ರದೇಶದಲ್ಲಿ ಸಸಿ ನಡುವುದಕ್ಕೆ ಟ್ರಂಚ್‌ ಕಡಿಯುವ ಕಾಮಗಾರಿ ಸಹ ನಡೆದಿದ್ದು, 300 ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಪಿಡಿಒ ಸಿ.ಕೆ. ತಿಮ್ಮಾಪುರ ತಿಳಿಸಿದರು.

ಹೊಸದಾಗಿ ಸೇರ್ಪಡೆಯಾಗಿರುವ ಕೂಲಿ ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ವಿತರಿಸಿದರು. ಈ ವೇಳೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರೂಪಾ ವಿ.ಕೆ., ಉಪವಲಯ ಅರಣ್ಯಾಧಿಕಾರಿ ಎಸ್‌ .ಎ. ಭಜಂತ್ರಿ, ಕೃಷಿ ಇಲಾಖೆ ತಾಂತ್ರಿಕ ಸಂಯೋಜಕಿ ಸಂಗಮ್ಮ, ಪಿಆರ್‌ಇಡಿ ತಾಂತ್ರಿಕ ಸಂಯೋಜಕ ಸಂತೋಷ ಹಾದಿಮನಿ, ಗ್ರಾಪಂ ಕಾರ್ಯದರ್ಶಿ ಆರ್‌.ವೈ. ಅಪಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next