ದೇವನಹಳ್ಳಿ: ಗ್ರಾಮಗಳ ಸರ್ವತೋಮುಖ ಅಭಿ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಪ್ರತಿ ಕಾರ್ಯಕರ್ತರು, ಮುಖಂಡರು ಶ್ರಮಿಸಲಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಅಣ್ಣೇಶ್ವರ ಮತ ಕ್ಷೇತ್ರದ ಅಭ್ಯರ್ಥಿ ಎ.ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಅಣ್ಣೇಶ್ವರ ಗ್ರಾಪಂನಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿ ಮಾತನಾಡಿ, 2010-15ರವರೆಗೆ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಮಾಡಿದ್ದ ಸಂದರ್ಭದಲ್ಲಿಗ್ರಾಮಗಳಲ್ಲಿ ಹೆಚ್ಚು ಅಭಿವೃದ್ಧಿಪಡಿಸಲಾಗಿತ್ತು. 2015-20ನೇ ಸಾಲಿನಲ್ಲಿ ಆಡಳಿತ ವಹಿಸಿಕೊಂಡಿದ್ದವರು ಗ್ರಾಮಗಳ ಅಭಿವೃದ್ಧಿಯನ್ನು ಮಾಡುವಲ್ಲಿ ವಿಫಲರಾಗಿದ್ದರು ಎಂದರು.
ಕಾಂಗ್ರೆಸ್ ಬೆಂಬಲಿತರ ಗೆಲುವು: ಈ ಬಾರಿ 19ಕ್ಕೆ 19ಸ್ಥಾನಗಳಲ್ಲಿಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿರೀಕ್ಷೆ ಇದೆ. ತಾವು ಗ್ರಾಪಂ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಪಂ ಅನ್ನು ಮಾದರಿಯನ್ನಾಗಿಸಿದ್ದು,ದೇಶ ಮತ್ತು ವಿದೇಶಗಳಿಂದ ತಂಡಗಳು ಬೇಟಿನೀಡಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದ್ದರು. ಮೂಲಭೂತಸೌಕರ್ಯಗಳನ್ನು ಪ್ರತಿ ಗಾಮಗಳಿಗೆ ಆದ್ಯತೆನೀಡುವುದರ ಮೂಲಕ ಗ್ರಾಪಂನಲ್ಲಿ ಕೆಲಸ ಮಾಡಲಾಗಿತ್ತು ಎಂದರು.
ಅಣ್ಣೇಶ್ವರ ಕ್ಷೇತ್ರಕ್ಕೆ ಎಸ್‌ಸಿ ಸ್ಥಾನಕ್ಕೆ ಮುನಿರಾಜು,ಸಾಮಾನ್ಯ ಮಹಿಳೆ ಮಂಜುಳಾ, ರುಕ್ಮಿಣಿಯಮ್ಮ, ಸಾಮಾನ್ಯ ಸ್ಥಾನಕ್ಕೆ ಚಂದ್ರಶೇಖರ್.ಕೆ, ಚಿಕ್ಕಸಣ್ಣೆಕ್ಷೇತ್ರಕ್ಕೆ ಸಾಮಾನ್ಯ ಸ್ಥಾನಕ್ಕೆ ನಂದ ಕುಮಾರ್,ಪರಿಶಿಷ್ಟಪಂಗಡ ಸ್ಥಾನಕ್ಕೆಮುನಿಯಪ್ಪ, ಭುವನಹಳ್ಳಿ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಉಮಾದೇವಿ,ಪರಿಶಿಷ್ಟ ಪಂಗಡ ಸ್ಥಾನಕ್ಕೆ ವೆಂಕಟೇಶ್, ದೊಡ್ಡಸಣ್ಣೆ ಮತ ಕ್ಷೇತ್ರಕ್ಕೆ ಸಾಮಾನ್ಯ ಸ್ಥಾನಕ್ಕೆ ನಂಜೇಗೌಡ, ಪರಿಶಿಷ್ಟ ಪಂಗಡ ಮಹಿಳಾ ಸ್ಥಾನಕ್ಕೆ ರಾಮಕ್ಕ ಸೇರಿದಂತೆ ಹಲವು ಅಭ್ಯರ್ಥಿಗಳು ಚುನಾವಣಾಧಿಕಾರಿ ಶಂಕರಪ್ಪ ಅವರಿಗೆ ತಂಡೋಪ ತಂಡವಾಗಿ ಬಂದು ನಾಮಪತ್ರ ಸಲ್ಲಿಸಿದರು.