ಇವುಗಳಿಲ್ಲದಿದ್ದರೆ ಜೀವಕುಲ ನಾಶವಾಗುತ್ತದೆ. ಮಾಲಿನ್ಯ ತಡೆಯಲು ಈಗಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಂಡರ್‌ಲಾದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ಹೇಳಿದರು.
Advertisement
ತಾಲೂಕಿನ ಬಿಡದಿ ಹೋಬಳಿಯಲ್ಲಿರುವ ವಂಡರ್‌ಲಾ ಹಾಲಿಡೇಸ್‌ನಲ್ಲಿ ನಡೆದ 2018ನೇ ಸಾಲಿನ ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ(ವೀಕಾ-2018) ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಸರ ಉಳಿಸುವುದರ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು. ವಂಡರ್‌ಲಾದ ಸಲಹೆಗಾರ ರಾಜಗೋಪಾಲನ್ ಮಾತನಾಡಿ, ತೀವ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣ,ವಿವೇಚನೆ ಇಲ್ಲದೆ ಮರಗಳನ್ನು ಕಡಿಯುತ್ತಿರುವುದು ಪರಿಸರ ವಿನಾಶಕ್ಕೆ ಮುನ್ನುಡಿ ಬರೆದಿವೆ. ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಜಳ ಆರಂಭವಾಗಿದೆ. ಅಂದರೆ ಮಾನವರು ಇದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
Related Articles
Advertisement
ಪ್ರಶಸ್ತಿ ವಿಜೇತರುವೀಕಾ-2018 ಪ್ರಶಸ್ತಿ ವಿಜೇತ ಶಾಲೆಗಳಿಗೆ “ಮಿಸ್ ಯೂನಿವರ್ಸ್ ಇಂಡಿಯಾ-2016′ ರೋಶ್ಮಿತಾ ಹರಿಮೂರ್ತಿ ಪ್ರಶಸ್ತಿ ವಿತರಿಸಿದರು.ಪ್ರಥಮ ಬಹುಮಾನ ತಮಿಳುನಾಡಿನ ಹೊಸೂರಿನ ಮಹರ್ಷಿ ವಿದ್ಯಾಮಂದಿರ ಸೆಕೆಂಡರಿ ಶಾಲೆಗೆ ದೊರಕಿದೆ. 50 ಸಾವಿರ ನಗದು ಬಹಮಾನವನ್ನು ಈ ಶಾಲೆ ಪಡೆದುಕೊಂಡಿದೆ. ದ್ವಿತೀಯ ಬಹುಮಾನ ದಕ್ಷಿಣ ಕನ್ನಡದ ಶ್ರೀ ಸತ್ಯಸಾಯಿ ಲೋಕ ಸೇವಾ ಶಾಲೆ ಹಾಗೂ ಬೆಂಗಳೂರಿನ ಸಾತನೂರು ಗ್ರಾಮದ ದೆಹಲಿ ಪಬ್ಲಿಕ್ ಶಾಲೆಯ ಪಾಲಾಗಿವೆ. ಈ ಶಾಲೆಗಳು ತಲಾ 25 ಸಾವಿರ ರೂ.ಬಹುಮಾನವನ್ನು ತನ್ನದಾಗಿಸಿಕೊಂಡಿವೆ. ತೃತೀಯ ಬಹುಮಾನವನ್ನು ಗದಗ
ಜಿಲ್ಲೆಯ ಗೋಜನೂರಿನ ಸರ್ಕಾರಿ ಪ್ರೌಢಶಾಲೆಗೆ, ದಾವಣಗೆರೆಯ ಅನ್ಮೋಲ್ ಪಬ್ಲಿಕ್ ಶಾಲೆ, ಬೆಂಗಳೂರಿನ ಕ್ರೈಸ್ಟ್ ಧರ್ಮಾರಾಮ್ ಶಾಲೆ ಪಡೆದುಕೊಂಡಿದ್ದು, ಈ ಮೂರು ಶಾಲೆಗಳಿಗೆ ತಲಾ 15 ಸಾವಿರ ರೂ.ನಗದು ಬಹುಮಾನ ವಿತರಿಸಲಾಯಿತು.