Advertisement

India’s Largest Amusement park: ಬೆಂಗಳೂರು ವಂಡರ್ಲಾಗೆ 18 ನೇ ವಾರ್ಷಿಕೋತ್ಸವದ ಸಂಭ್ರಮ

09:25 PM Oct 13, 2023 | Team Udayavani |

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಲಿಮಿಟೆಡ್, ಬೆಂಗಳೂರಿನಲ್ಲಿ ತನ್ನ 18 ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆಗಳನ್ನು ಘೋಷಿಸಿದೆ.

Advertisement

2005ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ವಂಡರ್ಲಾ, ಅಂದಿನಿಂದ ಇಂದಿನವರೆಗೂ ಸಾಕಷ್ಟು ಹೊಸಹೊಸ ಗೇಮ್ ಗಳನ್ನು ಪರಿಚಯಿಸಿದ್ದು ಮನರಂಜನೆ ನೀಡುತ್ತಾ ಬಂದಿದೆ.

ತನ್ನ 18 ನೇ ವಾರ್ಷಿಕೋತ್ಸವದಂದು, ವಂಡರ್ಲಾ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ
ಇದಲ್ಲದೆ, ವಂಡರ್ಲಾ ಬೆಂಗಳೂರು ಅ.14 ರಿಂದ 24 ರವರೆಗೆ ದಸರಾ ಹಬ್ಬವನ್ನು ಆಯೋಜಿಸಿದೆ.

ಪ್ರವಾಸಿಗರಿಗೆ ಮಂಗಳೂರು ಗೊಂಬೆ ಕುಣಿತ, ಭವ್ಯವಾದ ಮೆರವಣಿಗೆ, ಚಿಂಗಾರಿ ಮೇಳ, ಆಹಾರೋತ್ಸವ, ಡಿಜೆ ಮತ್ತು ಹೆಚ್ಚಿನವು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳಿಂದ ತುಂಬಿದ 11 ದಿನಗಳ ಕಾರ್ಯಕ್ರಮದಲ್ಲಿ ಆಯೋಜಿಸಿದೆ.

ಲಕ್ಕಿ ಡ್ರಾ ಸ್ಪರ್ಧೆ: ಅಕ್ಟೋಬರ್ 14 ರಿಂದ 24 ರವರೆಗೆ ವಂಡರ್ಲಾ ಪ್ರತಿದಿನ ಲಕ್ಕಿ ಡ್ರಾ ಸ್ಪರ್ಧೆಯನ್ನು ನಡೆಸಲಿದೆ, ಏಥರ್ ದ್ವಿಚಕ್ರ ವಾಹನವನ್ನು ಸ್ವೀಕರಿಸಲು ಪ್ರತಿ ದಿನ ಒಬ್ಬ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

Advertisement

ವಂಡರ್ಲಾ 180 ಹಿಂದುಳಿದ ವರ್ಗಗಳ ಮಕ್ಕಳನ್ನು ಉದ್ಯಾನವನದಲ್ಲಿ ಮನರಂಜನೆ ಪಡೆಯಲು ಆಯ್ಕೆ ಮಾಡಿದೆ, ಅವರಿಗೆ ಪೂರಕ ಪ್ರವೇಶ ಟಿಕೆಟ್ ಗಳು, ಉಚಿತ ಊಟ, ಹೈ ಟೀ ಮತ್ತು ಅನುಕೂಲಕ್ಕಾಗಿ ಲಾಕರ್ ಒದಗಿಸುತ್ತದೆ.
ವಂಡರ್ ಲಾ ಹಾಲಿಡೇಸ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ವಂಡರ್ಲಾ ಬೆಂಗಳೂರು ಉದ್ಯಾನವನವು ಸುಮಾರು 82 ಎಕರೆ ವಿಸ್ತೀರ್ಣ ಮತ್ತು ಒಟ್ಟು 1.2 ಮಿಲಿಯನ್ ಫುಟ್ಫಾಲ್ ಗಳನ್ನು ಹೊಂದಿರುವ ಈ ಅಮ್ಯೂಸ್ಮೆಂಟ್ ಪಾರ್ಕ್ 28 ಡ್ರೈ ಗೇಮ್ಸ್, 21 ವಾಟರ್ ಗೇಮ್ಸ್ ಮತ್ತು 12 ಮಕ್ಕಳ ಸ್ನೇಹಿ ಗೇಮ್ಸ್ ಒಳಗೊಂಡಂತೆ ಒಟ್ಟು 61 ವೈವಿಧ್ಯಮಯ ರೋಮಾಂಚಕ ಸವಾರಿಗಳನ್ನು ಹೊಂದಿದೆ. ಹೈ ಥ್ರಿಲ್ ರೋಲರ್ ಕೋಸ್ಟರ್  ಗಳಿಂದ ಹೃದಯ ಬಡಿತದ ಫ್ಲ್ಯಾಶ್ ಟವರ್, ವಂಡರ್ ಸ್ಪ್ಲಾಶ್ ಮತ್ತು ಇತರೆ ಅದ್ವಿತೀಯ ಆಟಿಕೆಗಳನ್ನು ಹೊಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next