Advertisement
ಎಂದಾದರೂ ರೈಲಿನಲ್ಲಿ ಪ್ರಯಾಣಿಸಿದ್ದೀರಾ? ರೈಲ್ವೇ ಸ್ಟೇಷನ್‌ಗೆ ಭೇಟಿ ನೀಡಿದ್ದೀರಾ? ಕಂಡಿದ್ದರೆ ನಿಮಗೆ ಅಲ್ಲಿನ ಪ್ರಪಂಚದ ಕುರಿತು ತಿಳಿದೇ ಇರುತ್ತೆ. ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ “ಎಲ್ಲಿದ್ದೀಯೇ ಮೀನಾ?’ ಕವಿತೆಯಲ್ಲಿ ಕಿಟಕಿಯಲ್ಲಿ ಬಳಿ ಕುಳಿತ ಮಗಳ ಜೊತೆ ಅವಳನ್ನು ಬೀಳ್ಕೊಡಲು ಬಂದ ತಾಯಿಯ ಚಿತ್ರಣವಿತ್ತು. ಕಿಟಕಿಯಿಂದಲೇ ಮಗಳ ತೊಡೆಯ ಮೇಲಿದ್ದ ಮೊಮ್ಮಗಳನ್ನು ನೋಡುತ್ತಾ ಮಗಳ ಜೊತೆ ರೈಲು ಹೋಗುವ ತನಕ ಸಂಭಾಷಿಸುವ ಕವಿತೆಯ ದೃಶ್ಯ ಅತಿ ಸಾಮಾನ್ಯವಾದುದು. ಇದೊಂದೇ ಅಲ್ಲ, ಇನ್ನೂ ಹತ್ತು ಹಲವು ಆಪ್ತ ಕತೆಗಳನ್ನು, ಚಿತ್ರಣಗಳನ್ನು ರೈಲು ನಿಲ್ದಾಣ ನಮ್ಮ ಮುಂದಿಡುತ್ತದೆ. ನಿಜವಾದ ಭಾರತವನ್ನು ನೋಡೋಕೆ ರೈಲು ಪ್ರಯಾಣ ಅತ್ಯುತ್ತಮ ದಾರಿ ಎಂದು ಹೇಳಿದವರು ಬೇರಾರೂ ಅಲ್ಲ, ಮಹಾತ್ಮ ಗಾಂಧಿ.
ರೈಲು ಪ್ರಯಾಣದ ಸಂದರ್ಭದಲ್ಲಿ ತೆಗೆಯಲಾದ ಆಸಕ್ತಿಕರ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅದರ ಜೊತೆಗೊಂದು ಚೆಂದದ ಅಡಿಬರಹವೊಂದನ್ನೂ ನೀಡಿರುತ್ತಾರೆ. ಈ ಫೋಟೋಗಳನ್ನು ನೋಡುತ್ತಿದ್ದರೆ, ಯಾರಿಗೇ ಆದರೂ ರೈಲುಪ್ರಯಾಣ ಮಾಡಬೇಕೆಂಬ ಆಸೆ ಮೂಡದಿದ್ದರೆ ಕೇಳಿ! ಈಗಾಗಲೇ 20,000ಕ್ಕೂ ಅಧಿಕ ಮಂದಿ ಈ ಪೇಜ್‌ಗೆ ಚಂದಾದಾರರಾಗಿದ್ದಾರೆ. ಇಲ್ಲಿಯ ತನಕ ಸುಮಾರು 650 ಪೋಸ್ಟ್‌ಗಳನ್ನು ಹಾಕಲಾಗಿದೆ.
Related Articles
ಈ ಪ್ರಾಜೆಕ್ಟ್‌ನ ರೂವಾರಿ ಮುಂಬೈನ ಶಾನು ಬಾಬರ್. ತಾವು ತೆಗೆದ ಫೋಟೋಗಳನ್ನು ಮಾತ್ರ ಆ ಪೇಜ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅದಕ್ಕೆ ಸಿಕ್ಕ ಸ್ಪಂದನೆಯಿಂದ ಸಂತಸಗೊಂಡ ಶಾನು ಅವರಿಗೆ ಆಗಲೇ ಅದನ್ನು ಒಂದು ಕಮ್ಯುನಿಟಿ ಪೇಜ್ ಆಗಿ ಪರಿವರ್ತಿಸುವ ಉಪಾಯ ಹೊಳೆದಿದ್ದು. ಅದೀಗ ಒಂದು ದೊಡ್ಡ ಸಂಘಟನೆಯಾಗಿ ಬೆಳೆದಿದೆ. ರೈಲಿನಲ್ಲಿ ಪ್ರಯಾಣಿಸಿದವರು ಚೆಂದ ಚೆಂದದ ಫೋಟೋಗಳನ್ನು ತೆಗೆದು #windowseatproject ಎಂದು ಟ್ಯಾಗ್ ಮಾಡಿ ಶೇರ್ ಮಾಡುತ್ತಿದ್ದಾರೆ.
Advertisement
ಇದರಲ್ಲಿ ನೀವು ಕೂಡ ರೈಲಿನಲ್ಲಿ ತೆಗೆದ ಚೆಂದದ ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು.