ಬೆಂಗಳೂರು: “ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ವಂಡರ್‌ಲಾ ಪಾರ್ಕ್ ಸಹ ಒಂದಾಗಿದೆ’ಎಂದು ನಟಿ ಹರಿಪ್ರಿಯಾ ಹೇಳಿದರು. ಮೈಸೂರು ರಸ್ತೆಯ ವಂಡರ್‌ಲಾದಲ್ಲಿ ವೇವ್ ರೈಡರ್ ಹಾಗೂ ಡ್ರಾಪ್ ಲೂಪ್ ಎನ್ನುವ ಎರಡು ನೂತನ ರೈಡ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಹಾಗೂ ಬೇರೆ ಬೇರೆ ನಗರಗಳಿಂದ ಬರುವ ಪರಿಚಯಸ್ಥರು ಬೆಂಗಳೂರಿನಲ್ಲಿ ಯಾವೆಲ್ಲ ಪ್ರೇಕ್ಷಣೀಯ ಸ್ಥಳಗಳು ಇವೆ ಎಂದು ಕೇಳಿದರೆ, ವಂಡರ್ ಲಾಗೆ ತಪ್ಪದೆ ಹೋಗಿ ಎಂದು ಸಜೆಸ್ಟ್ ಮಾಡುತ್ತೇನೆ ಎಂದರು.
ಈಗ ಮೋಜು ಮಾಡುವುದರ ಜತೆಗೆ ವಿಶ್ರಾಂತಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ವಂಡರ್‌ಲಾದಲ್ಲಿ ಉತ್ತಮ ಆಹಾರ ವ್ಯವಸ್ಥೆಯೂ ಇರುವುದರಿಂದ ವಂಡರ್ ಲಾ ಥ್ರಿಲ್ ನೀಡಲಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಮೋಜು ಮಾಡುವುದಕ್ಕೆ ಸೂಕ್ತವಾದ ಸ್ಥಳ ಇದಾಗಿದೆ ಎಂದರು.
ವಂಡರ್‌ಲಾ ಪಾರ್ಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ಮಾತನಾಡಿ, ವಂಡರ್‌ಲಾ ಪಾರ್ಕ್ ನಲ್ಲಿ ಈಗಾಗಲೇ 64 ರೀತಿಯ ವಿವಿಧ ಥ್ರಿಲ್ ನೀಡುವ ರೈಡ್ (ಆಟಗಳು) ಇದ್ದು, ಈಗ ಹೊಸದಾಗಿ ವೇವ್ ರೈಡರ್ ಹಾಗೂ ಡ್ರಾಪ್ ಲೂಪ್ ರೈಡ್‌ಗಳನ್ನು ಪರಿಚಯಿಸಲಾಗಿದೆ. ವೇವ್ ರೈಡರ್ ಅನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದರಲ್ಲಿ ರೈಡ್ ಮಾಡುವವರಿಗೆ ಶೌಲ್ಡರ್ ಲಾಕ್ ಹಾಗೂ ಲಾಜಿಕ್ ಕಂಟ್ರೋಲರ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಅದೇ ರೀತಿ ಡ್ರಾಪ್ ಲೂಪ್ ಸಹ ವಿಶೇಷ ಅನುಭವ ನೀಡಲಿದ್ದು, 12 ಮೀಟರ್ ಎತ್ತರದಿಂದ ಕೆಳಗೆ ನೀರಿನಲ್ಲಿ ಟ್ಯೂಬ್‌ನ ಮೂಲಕ ಇಳಿಸಲಾಗುತ್ತದೆ ಎಂದು ಹೇಳಿದರು.
ವಂಡರ್‌ಲಾ ನಿರ್ದೇಶಕರಾದ ಅರುಣ್ ಕೆ. ಚಿಟ್ಟಿಲಪಿಲ್ಲಿ ಮಾತನಾಡಿ, ದಸರಾ ಹಬ್ಬದ ಹಿನ್ನೆಲೆಯಲ್ಲಿ “ದಸರಾ ಧಮಾಕ ‘ಎನ್ನುವ ವಿಶೇಷ ಪ್ಯಾಕೇಜ್ ಪ್ರಾರಂಭಿಸಲಾಗಿದೆ. ಸೆ.28ರಿಂದ ಅ.8 ವರೆಗೆ ಪ್ಯಾಕೇಜ್ ಇರಲಿದೆ. ಟಿಕೆಟ್ ದರ ತಲಾ 1480 ರೂ. ನಿಗದಿ ಮಾಡಲಾಗಿದೆ. ದಸರಾ ಧಮಾಕದ ಅಂಗವಾಗಿ ಮ್ಯಾಜಿಕ್ ಶೋ, ಡಿಜೆ, ವಿವಿಧ ವಿಶೇಷ ಆಹಾರ ಮೇಳ, ಶಿಂಗಾರಿ ಮೇಳವನ್ನು ಆಯೋಜಿಸಲಾಗಿದೆ ಎಂದರು.
ವಂಡರ್ ಲಾ ಪಾರ್ಕ್‌ಗೆ ಬರುವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಂಡರ್ ಲಾದಲ್ಲಿ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಶುದ್ಧತೆಯನ್ನೂ ಕಾಪಾಡಿಕೊಳ್ಳಲಾಗುತ್ತಿದೆ ಎಂದರು. ಪ್ರತಿಯೊಬ್ಬರಿಗೆ ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ ತಲಾ 1089 ರೂ. ಹಾಗೂ ವಾರಾಂತ್ಯದಲ್ಲಿ 1395 ರೂ. ನಿಗದಿ ಮಾಡಲಾಗಿದೆ.
ಈಗ ವಂಡರ್‌ಕ್ಲಬ್ ಸದಸ್ಯತ್ವ ಪಡೆಯಲು ಇಚ್ಛಿಸುವವರಿಗೆ ಗೋಲ್ಡ್ ಹಾಗೂ ಡೈಮಂಡ್ ಎನ್ನುವ ಎರಡು ವಿಶೇಷ ಕಾರ್ಡ್ ನೀಡಲಾಗುತ್ತಿದೆ. ಸದಸ್ಯತ್ವ ಪಡೆಯುವ ಮೂಲಕ ವಿಶೇಷ ಕೊಡುಗೆಗಳನ್ನು ಪಡೆಯ ಬಹುದು. ದಂಪತಿಗಳು, ಯುವಕ, ಯುವತಿಯರು ಹಾಗೂ ಕುಟುಂಬ ಸದಸ್ಯರಿಗೆ ಪ್ರತ್ಯೇಕ ವಿಭಾಗಗಳಿದ್ದು ಮೂರರಿಂದ ಆರು ವರ್ಷದ ವರೆಗೆ ಈ ಕಾರ್ಡ್‌ಗಳನ್ನು ಬಳಸಬಹುದಾಗಿದೆ.
ದಂಪತಿಗಳಿಗೆ ಗೋಲ್ಡ್ ಕಾರ್ಡ್ ಪರಿಚಯಿಸಲಾಗಿದ್ದು ಮೂರು ವರ್ಷಕ್ಕೆ 18,299 ರೂ. ಹಾಗೂ ಡೈಮಂಡ್ ಕಾರ್ಡ್ ಆರು ವರ್ಷಕ್ಕೆ 33,999 ರೂ. ಇದೆ. ಕುಟುಂಬ ಸದಸ್ಯರಿಗೆ ಗೋಲ್ಡ್ ಕಾರ್ಡ್ ಮೂರು ವರ್ಷಕ್ಕೆ 25 ಸಾವಿರ ಹಾಗೂ ಡೈಮಂಡ್ ಕಾರ್ಡ್ ಆರು ವರ್ಷಕ್ಕೆ 47,500 ರೂ. ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 9945500011 ಸಂಪರ್ಕಿಸಬಹುದು.