Advertisement

ಬಾಂಗ್ಲಾದೇಶಕ್ಕೆ ಗೆಲುವು

06:55 AM Dec 11, 2018 | |

ಢಾಕಾ: ಪ್ರವಾಸಿ ವೆಸ್ಟ್‌ಇಂಡೀಸ್‌ ವಿರುದ್ಧ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ಬಾಂಗ್ಲಾದೇಶವು 5 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ.

Advertisement

ಮುಶ್ರಫೆ ಮೊರ್ತಜ ಮತ್ತು ಮುಸ್ತಾಫಿಜುರ್‌ ರೆಹಮಾನ್‌ ಅವರ ನಿಖರ ದಾಳಿಯ ನೆರವಿನಿಂದ ಬಾಂಗ್ಲಾದೇಶವು ವೆಸ್ಟ್‌ಇಂಡೀಸ್‌ ಮೊತ್ತವನ್ನು 9 ವಿಕೆಟಿಗೆ 195 ರನ್ನಿಗೆ ನಿಯಂತ್ರಿಸಿತ್ತು. ಆಬಳಿಕ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಬಾಂಗ್ಲಾದೇಶವು 35.1 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 196 ರನ್‌ ಗಳಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ಬಾಂಗ್ಲಾದೇಶವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ವಿಂಡೀಸ್‌ನಂತೆ ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. 42 ರನ್‌ ತಲುಪುವಷ್ಟರಲ್ಲಿ ತಂಡ ಎರಡು ವಿಕೆಟ್‌ ಕಳೆದುಕೊಂಡಿತ್ತು. ಆಬಳಿಕ ಮುಶ್ಫಿಕರ್‌ ಅವರು ಲಿಟನ್‌ ದಾಸ್‌ ಮತ್ತು ಶಕಿಬ್‌ ಅಲ್‌ ಹಸನ್‌ ಜತೆಗೂಡಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಬಾಂಗ್ಲಾದ ರನ್‌ ವೇಗಕ್ಕೆ ಕಡಿವಾಣ ಹಾಕಲು ವಿಂಡೀಸ್‌ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಉತ್ತಮವಾಗಿ ಆಡಿದ ಮುಶ್ಫಿಕರ್‌ 70 ಎಸೆತ ಎದುರಿಸಿ 5 ಬೌಂಡರಿ ನೆರವಿನಿಂದ 55 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ 9 ವಿಕೆಟಿಗೆ 195; ಬಾಂಗ್ಲಾದೇಶ 35.1 ಓವರ್‌ಗಳಲ್ಲಿ 5 ವಿಕೆಟಿಗೆ 196.

Advertisement

Udayavani is now on Telegram. Click here to join our channel and stay updated with the latest news.

Next