ಒಟ್ಟು 5 ಸುತ್ತುಗಳ ಸ್ಪರ್ಧೆಯಲ್ಲಿ ಭಾರತ ಆರಂಭಿಕ 2 ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ಆದರೆ ತಿರುಗಿ ಬಿದ್ದ ರೊಮೇನಿಯಾ ಮುಂದಿನೆರಡು ಪಂದ್ಯಗಳನ್ನು ಗೆದ್ದು 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಿರ್ಣಾಯಕ ಪಂದ್ಯದಲ್ಲಿ ಮಣಿಕಾ ಬಾತ್ರಾ ಭಾರತದ ಗೆಲುವನ್ನು ಸಾರಿದರು.
Advertisement
ಮೊದಲ ಡಬಲ್ಸ್‌ನಲ್ಲಿ ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್-ಶ್ರೀಜಾ ಅಕುಲಾ ಸೇರಿಕೊಂಡು ಅಡಿನಾ ಡಿಯಾಕೊನು-ಎಲಿಜಬೆತ ಸಮರಾ ಜೋಡಿ ವಿರುದ್ಧ 11-9, 12-10, 11-7 ಅಂತರದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಮಣಿಕಾ ಬಾತ್ರಾ 11-5, 11-7, 11-7 ಅಂತರದಿಂದ ಬರ್ನಾಡೆಟ್ ಸೋಕ್ಸ್ ವಿರುದ್ಧ ಗೆದ್ದರು.
ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ಭಾರತದ ಪುರುಷರು ಸೋಮವಾರ ಚೀನವನ್ನು ಎದುರಿಸಲಿದೆ. ಶರತ್ ಕಮಲ್, ಮಾನವ್ ಥಾಕರ್, ಹರ್ಮೀತ್ ದೇಸಾಯಿ ಭಾರತ ತಂಡದಲ್ಲಿದ್ದಾರೆ.