Advertisement

ಮಹಿಳಾ ಟಿ20 ವಿಶ್ವಕಪ್‌ :ವಿಜಯ ಭಾರತ

06:10 AM Nov 18, 2018 | |

ಪ್ರಾವಿಡೆನ್ಸ್‌ (ಗಯಾನ): ಸ್ಮತಿ ಮಂಧನ (83 ರನ್‌) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (43 ರನ್‌) ಸಾಹಸಮಯ ಬ್ಯಾಟಿಂಗ್‌ ಪ್ರದರ್ಶನದಿಂದ ಮಹಿಳಾ ಟಿ20 ವಿಶ್ವಕಪ್‌ ಮಹಿಳಾ ಲೀಗ್‌ ಹಂತದ ಔಪಚಾರಿಕ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 48 ರನ್‌ ಗೆಲುವು ಸಾಧಿಸಿದೆ. 

Advertisement

“ಬಿ’ ಗುಂಪಿನಿಂದ ಈಗಾಗಲೇ ಭಾರತ- ಆಸೀಸ್‌ ಸೆಮಿಫೈನಲ್‌ ತಲುಪಿವೆ. ಒಟ್ಟಾರೆ ಭಾರತ ತಾನಾಡಿರುವ ಗುಂಪಿನ ಎಲ್ಲ ಪಂದ್ಯವನ್ನು ಗೆದ್ದು ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

ಆಸೀಸ್‌ ಪರೇಡ್‌: ಶನಿವಾರದ ಪಂದ್ಯ ಎರಡೂ ತಂಡಗಳಿಗು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗೆ 8 ವಿಕೆಟ್‌ಗೆ 167 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ಅನುಜಾ ಪಾಟೀಲ್‌,  ದೀಪ್ತಿ ಶರ್ಮ, ರಾಧಾ ಯಾದವ್‌  ಹಾಗೂ ಪೂನಮ್‌ ಯಾದವ್‌ ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿ 19.4 ಓವರ್‌ಗೆ 119 ರನ್‌ಗಳಿಸಿ ಆಲೌಟಾಯಿತು. ಆಸೀಸ್‌ ಪರ ಎಲಿಸ್‌ ಪೆರ್ರಿ (ಅಜೇಯ 39 ರನ್‌) ವೈಯಕ್ತಿಕ ಅತ್ಯಧಿಕ ರನ್‌. ಉಳಿದಂತೆ ಎಲ್ಲ ಬ್ಯಾಟ್ಸ್‌ಮನ್‌ಗಳು ಭಾರತೀಯರ ಬೌಲಿಂಗ್‌ ದಾಳಿಯೆದುರು ರನ್‌ಗಳಿಸಲಾಗದೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ಸ್ಮತಿ, ಹರ್ಮನ್‌ ಅಬ್ಬರ: ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತಕ್ಕೆ ಸ್ಮತಿ ಮಂಧನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ನೆರವಾದರು. 55 ಎಸೆತ ಎದುರಿಸಿದ ಸ್ಮತಿ ಮಂಧನ 9 ಬೌಂಡರಿ ಹಾಗೂ 3 ಸಿಕ್ಸರ್‌ನಿಂದ ಅಬ್ಬರಿಸಿದರು. ಮತ್ತೋರ್ವ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ ಕೇವಲ 27 ಎಸೆತದಿಂದ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.

ಸ್ಕೋರ್‌ ವಿವರ
ಭಾರತ 20 ಓವರ್‌ಗೆ 167/8

ತಾನಿಯಾ ಭಾಟಿಯಾ ಸಿ ಲ್ಯಾನಿಂಗ್‌ ಬಿ ಗಾಡ್ನìರ್‌    2
ಸ್ಮತಿ ಮಂಧನ ಸಿ ಪೆರ್ರಿ ಬಿ ಶಟ್‌ 83
ಜೆಮಿಮಾ ರಾಡ್ರಿಗಸ್‌ ಸಿ ವಿಲಾನಿ ಬಿ ಕಿಮಿನ್ಸ್‌    43
ವೇದಾ ಕೃಷ್ಣಮೂರ್ತಿ ಸಿ ವಲೆಮ್ನಿಕ್‌ ಬಿ ಗಾರ್ಡ°ರ್‌ 3
ಹೇಮಲತಾ ಬಿ ಪೆರ್ರಿ    1
ದೀಪ್ತಿ ಶರ್ಮ ಬಿ ಪೆರ್ರಿ    8
ಅರುಂಧತಿ ರೆಡ್ಡಿ ಸಿ ಸಬ್‌ (ಬೊಲ್ಟನ್‌) ಬಿ ಪೆರ್ರಿ    6
ರಾಧಾ ಯಾದವ್‌ ಅಜೇಯ    1
ಇತರೆ: 14
ವಿಕೆಟ್‌ ಪತನ: 1-5, 2-49, 3-117, 4-131, 5-136, 6-154, 7-166, 8-167
ಬೌಲಿಂಗ್‌
ವಲೆಮ್ನಿಕ್‌ 2    0    9    0
ಆಶೆÉ ಗಾರ್ಡ°ರ್‌ 3    0    25    2
ಮೆಗಾನ್‌ ಶಟ್‌ 4    0    30    1
ಸೋಫಿ ಮೋಲಿನೆಕ್ಸ್‌ 4    0    45    0
ಡೆಲಿಸ್ಸಾ ಕಿಮಿನ್ಸ್‌ 4    0    42    2
ಎಲಿಸ್‌ ಪೆರ್ರಿ 3    0    16    3

Advertisement

ಆಸ್ಟ್ರೇಲಿಯ 19.4 ಓವರ್‌ಗೆ 119 ಆಲೌಟ್‌
ಬೆಥ್‌ ಮೋನಿ ಬಿ ಶರ್ಮ 19
ಎಲಿಸ್‌ ವಿಲಾನಿ ಸಿ ವೇದಾ ಬಿ ಶರ್ಮ    6
ಆಶೆÉ ಗಾಡ್ನìರ್‌ ಸಿ ವೇದಾ ಬಿ ಪೂನಮ್‌
ಲ್ಯಾನಿಂಗ್‌ ಸಿ ವೇದಾ ಬಿ ಯಾದವ್‌ 10
ಹೇಯ್ನ$Õ ಸ್ಟಂಪ್‌ ಭಾಟಿಯಾ ಬಿ ಪೂನಮ್‌ 8
ಎಲಿಸ್‌ ಪೆರ್ರಿ ಅಜೇಯ    39
ಸೋಫಿ ಮೊಲಿನೆಕ್ಸ್‌ ಸಿ ವೇದಾ ಬಿ ಪಾಟೀಲ್‌ 9
ಡೆಲಿಸಾ ಕಿಮಿನ್ಸ್‌ ಸಿಬಿ ಯಾದವ್‌ 1
ಮೆಗಾನ್‌ ಶಟ್‌ ಸಿ ಭಾಟಿಯಾ ಬಿ ಪಾಟೀಲ್‌ 4
ವಾಲೆಮ್ನಿಕ್‌ ಸ್ಟಂಪ್‌ ಭಾಟಿಯಾ ಬಿ ಪಾಟೀಲ್‌ 0
ಹೇಯ್ನ$Õ (ಆಬೆÕಂಟ್‌ಹರ್ಟ್‌)    0
ಇತರೆ:    3
ವಿಕೆಟ್‌ ಪತನ: 1-27, 2-27, 3-56, 4-59, 5-90, 6-103, 7-105, 8-118, 9-119
ಬೌಲಿಂಗ್‌
ಅರುಂಧತಿ ರೆಡ್ಡಿ 2    0    19    0
ಅನುಜಾ ಪಾಟೀಲ್‌ 3.4 0    15    3
ದೀಪ್ತಿ ಶರ್ಮ 4    0    24    2
ರಾಧಾ ಯಾದವ್‌ 4    0    13    2
ಪೂನಮ್‌ ಯಾದವ್‌ 4    0    28    2
ಹರ್ಮನ್‌ಪ್ರೀತ್‌ ಕೌರ್‌ 2    0    19    0

Advertisement

Udayavani is now on Telegram. Click here to join our channel and stay updated with the latest news.

Next