Advertisement
ಭಾನುವಾರ ಭಾರತ ತಂಡ ಎ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನು ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಮಾತ್ರ ಸೆಮಿಫೈನಲ್ ಸ್ಥಾನಕ್ಕೆ ಸನಿಹವಾಗಲಿದೆ. ಇನ್ನೊಂದು ಕಡೆ ಅ.14ರಂದು ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯವಿದೆ. ಇಲ್ಲಿ ನ್ಯೂಜಿಲೆಂಡ್ ಏನು ಮಾಡುತ್ತದೆ ಅನ್ನುವುದೂ ಭಾರತದ ಸ್ಥಿತಿಯನ್ನು ನಿರ್ಧರಿಸಲಿದೆ.
Related Articles
Advertisement
ಆಸೀಸ್‌ಗೆ ಗಾಯಾಳುಗಳದ್ದೇ ಚಿಂತೆ: ಆಸ್ಟ್ರೇಲಿಯಾ ಸತತ ಮೂರೂ ಪಂದ್ಯ ಗೆದ್ದು ಅಮೋಘ ಪ್ರದರ್ಶನ ನೀಡಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ತಂಡ ಉತ್ತಮವಾಗಿದೆ. ರನ್‌ರೇಟ್ ಅಂತೂ 2ನ್ನು ದಾಟಿರುವುದರಿಂದ ಎ ಗುಂಪಿನಿಂದ ಬಹುತೇಕ ಅಗ್ರಸ್ಥಾನಿಯಾಗೇ ಸೆಮಿಫೈನಲ್‌ಗೇರುವುದು ಖಚಿತ. ಭಾನುವಾರ ಅದು ಸೋತರೂ ಅದರ ಉಪಾಂತ್ಯಕ್ಕೇನು ಧಕ್ಕೆಯಿಲ್ಲ. ಆದರೆ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡಿದೆ. ನಾಯಕಿ ಅಲಿಸ್ಸಾ ಹೀಲಿ ಬಲಪಾದಕ್ಕೆ ಬಲವಾದ ಏಟು ಮಾಡಿಕೊಂಡಿದ್ದಾರೆ. ವೇಗಿ ಟಯಾÉ ವ್ಲಾಮಿಂಕ್ ಭುಜದ ಮೂಳೆಗೆ ಏಟು ಬಿದ್ದಿದೆ. ಇಬ್ಬರೂ ಭಾನುವಾರ ಆಡುವುದು ಅನುಮಾನ. ಗಾಯ ತೀವ್ರವಾದರೆ ಕೂಟದಿಂದಲೇ ಹೊರಬೀಳಬಹುದು.
ಸಂಭಾವ್ಯ ತಂಡ:
ಅಂಕಣ ಗುಟ್ಟು:
ಶಾರ್ಜಾ ಅಂಕಣ ಹಿಂದಿನಿಂದಲೂ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಗರಿಷ್ಠ ನೆರವು ನೀಡಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದೇ ಜಾಸ್ತಿ. ವೇಗಿಗಳಿಗೆ ನೆರವು ಕಡಿಮೆ. ಪಂದ್ಯ ಮುಂದುವರಿದಂತೆಲ್ಲ ನಿಧಾನಗತಿಯ ಎಸೆತಗಳಿಗೆ ನೆರವು ಜಾಸ್ತಿ. ಸ್ಪಿನ್ನರ್‌ಗಳು ಹೆಚ್ಚು ಹಿಡಿತ ಸಾಧಿಸಲಿದ್ದಾರೆ. ಅಂಕಣ ಸಣ್ಣದಾಗಿರುವುದರಿಂದ ಬ್ಯಾಟರ್‌ಗಳಿಗೆ ಜಾಸ್ತಿ ಅನುಕೂಲ.
ಸೆಮಿಫೈನಲ್ ಲೆಕ್ಕಾಚಾರ: ಇಂದು ಭಾರತ ಗೆಲ್ಲಬೇಕು, ನಾಳೆ ಕಿವೀಸ್ ಸೋಲಬೇಕು:
ಪ್ರಸ್ತುತ ಭಾರತ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ 0.576 ರನ್‌ರೇಟ್ ಹೊಂದಿದೆ. ಭಾರತದ ಸೆಮಿಫೈನಲ್ ಲೆಕ್ಕಾಚಾರದಲ್ಲಿ ದೊಡ್ಡ ಸವಾಲಾಗಿರುವುದು ನ್ಯೂಜಿಲೆಂಡ್. ಶನಿವಾರ ಶ್ರೀಲಂಕಾವನ್ನು ಭರ್ಜರಿಯಾಗಿ ಸೋಲಿಸಿರುವ ನ್ಯೂಜಿಲೆಂಡ್ 3 ಪಂದ್ಯಗಳಲ್ಲಿ 2 ಜಯ, 1 ಸೋಲಿನೊಂದಿಗೆ 0.282 ರನ್‌ರೇಟ್ ಸಾಧಿಸಿ 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳ ಅಂಕ ಸಮನಾಗಿದೆ. ಭಾರತ ಭಾನುವಾರ ಆಸೀಸ್ ವಿರುದ್ಧ ಗೆದ್ದು, ರನ್‌ರೇಟನ್ನು ಇನ್ನಷ್ಟು ಏರಿಸಿಕೊಂಡರೆ, ನ್ಯೂಜಿಲೆಂಡ್‌ಗೆ ಸಂಕಷ್ಟ ಖಾತ್ರಿ. ಆಗ ಕಿವೀಸ್ ಸೋಮವಾರ ಪಾಕಿಸ್ತಾನದ ವಿರುದ್ಧ ಬರೀ ಗೆಲ್ಲುವುದು ಮಾತ್ರವಲ್ಲ, ರನ್ ದರದಲ್ಲಿ ಭಾರತವನ್ನು ಮೀರಿಸಬೇಕಾಗುತ್ತದೆ. ಭಾನುವಾರ ಭಾರತ ಗೆದ್ದು, ಸೋಮವಾರ ಕಿವೀಸ್ ಸೋತರೆ ಭಾರತ ಉಪಾಂತ್ಯಕ್ಕೇರಲಿದೆ. ಇದರೊಂದಿಗೆ ಇನ್ನೂ ಒಂದು ಸಾಧ್ಯತೆಯಿದೆ. ಭಾನುವಾರ ಭಾರತ ಸೋತು, ಸೋಮವಾರ ಕಿವೀಸ್ ಕೂಡ ಸೋತರೆ ಆಗಲೂ ಅಂಕ ಸಮವಾಗುವುದರಿಂದ, ರನ್‌ರೇಟ್ ಜಾಸ್ತಿಯಿರುವ ತಂಡ ಉಪಾಂತ್ಯಕ್ಕೇರಲಿದೆ. ಪ್ರಸ್ತುತ ರನ್‌ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ.
ಭಾರತ: ಶಫಾಲಿ, ಸ್ಮತಿ, ಹರ್ಮನ್ (ನಾಯಕಿ), ಜೆಮಿಮಾ, ರಿಚಾ, ದೀಪ್ತಿ, ಸಜನಾ, ಅರುಂಧತಿ, ಶ್ರೇಯಾಂಕಾ, ಆಶಾ, ರೇಣುಕಾ.
ಆಸ್ಟ್ರೇಲಿಯಾ: ಮೂನಿ, ಹೀಲಿ, ಪೆರ್ರಿ, ಗಾಡ್ನರ್, ಲಿಚ್‌ಫೀಲ್ಡ್, ಟಹ್ಲಿಯಾ, ವೇರ್‌ಹ್ಯಾಮ್, ಸದರ್ಲೆಂಡ್, ಮೊಲಿನೆಕ್ಸ್, ಶಟ್, ವ್ಲಾಮಿಂಕ್
ಮುಖಾಮುಖಿ:
ಒಟ್ಟು ಪಂದ್ಯ 34
ಆಸ್ಟ್ರೇಲಿಯಾ ಜಯ 25
ಭಾರತ ಜಯ 7
ಫಲಿತಾಂಶವಿಲ್ಲ 1
ಟೈ 1
ಆರಂಭ: ರಾ.7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ (ಟೀವಿ), ಹಾಟ್‌ಸ್ಟಾರ್ (ಆ್ಯಪ್)