Advertisement

ವನಿತಾ ಟಿ20 ತ್ರಿಕೋನ ಸರಣಿ: ಭಾರತ ತಂಡದ ಅಜೇಯ ಅಭಿಯಾನ

07:30 AM Jan 31, 2023 | Team Udayavani |

ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ಭಾರತ ತಂಡ ವನಿತಾ ಟಿ20 ತ್ರಿಕೋನ ಸರಣಿಯಲ್ಲಿ ಅಜೇಯ ಓಟ ಕಾಯ್ದುಕೊಂಡು ಫೈನಲ್‌ಗೆ ಲಗ್ಗೆ ಇರಿಸಿದೆ. ಪ್ರಶಸ್ತಿ ಸಮರ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಈಸ್ಟ್‌ ಲಂಡನ್‌ನಲ್ಲಿ ನಡೆಯಲಿದೆ.

Advertisement

ಈ ನಡುವೆ ಸೋಮವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಅಂತಿಮ ಲೀಗ್‌ ಪಂದ್ಯ ಭಾರತದ ಫೈನಲ್‌ ಅಭ್ಯಾಸಕ್ಕೆ ಮೀಸಲಾಯಿತು. ಇದನ್ನು ಹರ್ಮನ್‌ಪ್ರೀತ್‌ ಕೌರ್‌ ಪಡೆ 8 ವಿಕೆಟ್‌ಗಳಿಂದ ಜಯಿಸಿತು.

ವೆಸ್ಟ್‌ ಇಂಡೀಸ್‌ 94
ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ ಕೇವಲ 94 ರನ್‌ ಮಾಡಿದರೆ, ಭಾರತ 13.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 95 ರನ್‌ ಗಳಿಸಿತು. ಘಾತಕ ಬೌಲಿಂಗ್‌ ದಾಳಿ ಸಂಘಟಿಸಿದ ದೀಪ್ತಿ ಶರ್ಮ 11 ರನ್ನಿಗೆ 3 ವಿಕೆಟ್‌ ಕಿತ್ತರು. ಅವರೆಸೆದ 4 ಓವರ್‌ಗಳಲ್ಲಿ 2 ಓವರ್‌ ಮೇಡನ್‌ ಆಗಿತ್ತು. ಪೂಜಾ ವಸ್ತ್ರಾಕರ್‌ 19 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು. ರಾಜೇಶ್ವರಿ ಗಾಯಕ್ವಾಡ್‌ ಬೌಲಿಂಗ್‌ ಕೂಡ ಆಕರ್ಷಕವಾಗಿತ್ತು (4-1-9-1).

ಚೇಸಿಂಗ್‌ ವೇಳೆ ಜೆಮಿಮಾ ರೋಡ್ರಿಗಸ್‌ 42, ಹರ್ಮನ್‌ಪ್ರೀತ್‌ ಕೌರ್‌ 32 ರನ್‌ ಮಾಡಿ ಅಜೇಯರಾಗಿ ಉಳಿದರು.

ಒಂದು ಪಂದ್ಯ ಮಳೆಪಾಲು
ವೆಸ್ಟ್‌ ಇಂಡೀಸ್‌ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿತು. ಭಾರತ-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಸುತ್ತಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next