Advertisement

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

01:07 AM Apr 29, 2024 | Team Udayavani |

ಸಿಲ್ಹೆಟ್‌ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ವನಿತಾ ಟಿ20 ಸರಣಿಯನ್ನು ಭಾರತ ಗೆಲುವಿನೊಂದಿಗೆ ಆರಂಭಿಸಿದೆ. ರವಿವಾರ ನಡೆದ ಮೊದಲ ಪಂದ್ಯವನ್ನು 44 ರನ್ನುಗಳಿಂದ ತನ್ನದಾಗಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 145 ರನ್‌ ಮಾಡಿದರೆ, ಬಾಂಗ್ಲಾ 8 ವಿಕೆಟಿಗೆ ಕೇವಲ 101 ರನ್‌ ಗಳಿಸಿತು.

ಭಾರತದ ಪರ ಯಾಸ್ತಿಕಾ ಭಾಟಿಯಾ 36, ಶಫಾಲಿ ವರ್ಮ 31, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 30 ಹಾಗೂ ರಿಚಾ ಘೋಷ್‌ 23 ರನ್‌ ಮಾಡಿದರು.

ಚೇಸಿಂಗ್‌ ವೇಳೆ ಬಾಂಗ್ಲಾ ನಾಯಕಿ ನಿಗಾರ್‌ ಸುಲ್ತಾನಾ ಏಕಾಂಗಿಯಾಗಿ ಹೋರಾಡಿ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಿಸಿದರು (51). ಭಾರತ ಸಾಂ ಕ ಬೌಲಿಂಗ್‌ ದಾಳಿಯ ಮೂಲಕ ಗಮನ ಸೆಳೆಯಿತು. ರೇಣುಕಾ ಠಾಕೂರ್‌ ಸಿಂಗ್‌ 3, ಪೂಜಾ ವಸ್ತ್ರಾಕರ್‌ 2, ಶ್ರೇಯಾಂಕಾ ಪಾಟೀಲ್‌, ದೀಪ್ತಿ ಶರ್ಮ ಮತ್ತು ರಾಧಾ ಯಾದವ್‌ ತಲಾ ಒಂದು ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next