Advertisement
ಭಾರತೀಯ ಜನಸೇವಾ ಟ್ರಸ್ಟ್ ಪ್ರವರ್ತಿತ ಭಾರತೀಯ ಜಾಗೃತ ಮಹಿಳಾ ವೇದಿಕೆಯ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ನಡೆದ ‘ಮಹಿಳಾ ಕಾರ್ಮಿಕರ ಹಕ್ಕುಗಳು ಮತ್ತು ಮಾನಸಿಕ ಆರೋಗ್ಯ’ ಎಂಬ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ವೇದಿಕೆಯು ಜಿಲ್ಲೆಯಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತರಿಸಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ವಸಂತ ಯೆಯ್ನಾಡಿ ಮಾತನಾಡಿ, ಮಹಿಳಾ ಸಂಘಟನೆಗಳು ಕೇವಲ ಸಾಂಸ್ಕೃತಿಕ, ಮನೋರಂಜನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ಮಹಿಳೆಯರ ಪರವಾಗಿ ಮಾತ್ರ ಕೆಲಸ ಮಾಡಬೇಕು ಈ ಉದ್ದೇದಿಂದ ವೇದಿಕೆಯನ್ನು ಹುಟ್ಟುಹಾಕಲಾಗಿದೆ ಎಂದು ಹೇಳಿದರು. ಟ್ರಸ್ಟ್‌ನ ಕಾನೂನು ಘಟಕದ ಮುಖ್ಯಸ್ಥ ಎಸ್.ಎನ್. ಭಟ್ ಅವರು ಮಹಿಳಾ ಕಾರ್ಮಿಕರ ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. ಉಪಾಧ್ಯಕ್ಷ ದಿನೇಶ್ ಬಂಗೇರ, ಟ್ರಸ್ಟಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಕೀರ್ತನ ಪ್ರವೀಣ್ ಸ್ವಾಗತಿಸಿ,ಶಿಲ್ಪ ನವೀನ್ ವಂದಿಸಿದರು. ನಿಖೀಲ್ ಮತ್ತು ತುಷಾರ್ ಪ್ರಾರ್ಥನೆಗೈದರು. ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Related Articles
ಜಿಲ್ಲಾಧ್ಯಕ್ಷರಾಗಿ ರೂಪಾ ಡಿ. ಬಂಗೇರ, ಕಾರ್ಯಾಧ್ಯಕ್ಷರಾಗಿ ವಿಜಯಶ್ರೀ ಗಟ್ಟಿ, ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಪವಿತ್ರ ರಾಜನ್, ಸಮಿತಿ ಸದಸ್ಯೆಯರಾಗಿ ಸುಚಿತ್ರಾ ಉದಯನಗರ, ವೀಣಾ ಗುಂಡಳಿಕೆ, ಗಾಯತ್ರಿ ಲೋಕೇಶ್, ಕೀರ್ತನಾ ಪ್ರವೀಣ್, ಲಕ್ಷ್ಮೀ ಸುನೀಲ್, ಜಯಪ್ರದಾ ಹರಿಣಾಕ್ಷ, ಹೇಮಲತಾ ಮುರಳಿ, ಗೀತಾ ರಾಜೇಶ್ ಅವರನ್ನು ಆರಿಸಲಾಯಿತು.
Advertisement