Advertisement

ಮಹಿಳಾ ಅಡುಗೆದಾರರ ಪ್ರತಿಭಟನೆ

04:25 PM Jun 16, 2018 | |

ಮಾನ್ವಿ: ಬಿಸಿಎಂ ಹಾಸ್ಟೆಲ್‌ ಮಹಿಳಾ ಅಡುಗೆದಾರರು ಬಾಕಿ ಇರುವ ತಮ್ಮ ಐದಾರು ತಿಂಗಳ ವೇತನ ನೀಡಲು ಒತ್ತಾಯಿಸಿ ಹಾಗೂ ಅಡುಗೆದಾರರನ್ನು ತೆಗೆದು ಹಾಕುತ್ತಿರುವುದನ್ನು ವಿರೋಧಿ ಸಿಬಿಸಿಎಂ ಕಚೇರಿಗೆ ಮುತ್ತಿಗೆ ಹಾಕಿದರು.

Advertisement

ಈ ವೇಳೆ ಮಾತನಾಡಿದ ಅಡುಗೆದಾರರಾದ ಅಂಬಿಕಾ, ಕಳೆದ ಐದಾರು ತಿಂಗಳಿಂದ ಯಾರಿಗೂ ಸಂಬಳ ನೀಡಿಲ್ಲ. ಅಲ್ಲದೆ ಅಡುಗೆ ಕೆಲಸವನ್ನು ಟೆಂಡರ್‌ ನೀಡಲಾಗುತ್ತಿದೆ. ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್‌ ಗಲ್ಲಿ ಮಹಿಳಾ ಅಡುಗೆದಾರರು ಅಗತ್ಯಕ್ಕಿಂತ ಹೆಚ್ಚು ಜನ ಇದ್ದೀರಿ ಎಂದು ಹೇಳಿ ಬಹುತೇಕರನ್ನು ಕೆಲಸದಿಂದ ಬಿಡಿಸಲಾಗುತ್ತಿದೆ. ಅಡುಗೆ ದಾರರನ್ನು ಬಿಡಿಸುವಲ್ಲಿಯೂ ಸಹ ತಾರತಮ್ಯ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಗೂ ಹಿಂದಿನಿಂದ ಕಾರ್ಯ ನಿರ್ವಹಿಸಿದವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.

4 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ತಾಲೂಕು ವಿಸ್ತರಣಾಧಿಕಾರಿ ಮಹಮ್ಮದ್‌ ಪ್ರತಿಭಟನಾಕಾರರೊಂದಿಗೆ
ಚರ್ಚಿಸಿದರು. ಇಂದು ಮೂರು ತಿಂಗಳು ಸಂಬಳ ಪಾವತಿಸಲಾಗುವುದು. ಇನ್ನುಳಿದ ವೇತನ ಮತ್ತು
ಅಡುಗೆದಾರರನ್ನು ಕೈಬಿಡುವ ವಿಷಯದ ಬಗ್ಗೆ ಇಲಾಖೆ ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ
ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  

ವಿವಿಧ ಹಾಸ್ಟೆಲ್‌ಗ‌ಳಲ್ಲಿ ಕಾರ್ಯ ನಿರ್ವಹಿಸುವ ಶರಣಮ್ಮ,ಗೀತಮ್ಮ, ಯಂಕಮ್ಮ, ವಿರುಪಮ್ಮ, ಮುಮ್ತಾಜ್‌, ಹಾಜೀರಾ ಬೇಗಂ, ಈರಮ್ಮ, ಶಹಮೀದಾ, ಕಾಳಮ್ಮ, ಹುಲಿಗಮ್ಮ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next