Advertisement

ವನಿತಾ ಪ್ರೀಮಿಯರ್‌ ಲೀಗ್‌: ಟಾಟಾಗೆ ಟೈಟಲ್‌ ಪ್ರಾಯೋಜಕತ್ವ

11:39 PM Feb 21, 2023 | Team Udayavani |

ಹೊಸದಿಲ್ಲಿ: ಐಪಿಎಲ್‌ನಂತೆ ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ ಟೈಟಲ್‌ ಪ್ರಾಯೋಜಕತ್ವದ ಹಕ್ಕು ಕೂಡ ಟಾಟಾ ಸಮೂಹದ ಪಾಲಾಗಿದೆ.

Advertisement

ಬಿಸಿಸಿಐ ಮೂಲವೊಂದು ಇದನ್ನು ತಿಳಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಟಾಟಾ ಗ್ರೂಪ್‌ ಈ ಹಕ್ಕನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ ಇದು ಎಷ್ಟು ಮೊತ್ತದ ಒಡಂಬಡಿಕೆ ಎಂಬುದು ತಿಳಿದು ಬಂದಿಲ್ಲ.

ಕಳೆದ ವರ್ಷವಷ್ಟೇ ಟಾಟಾ ಗ್ರೂಪ್‌ ಐಪಿಎಲ್‌ ಟೈಟಲ್‌ ಪ್ರಾಯೋಜಕತ್ವ ಪಡೆದಿತ್ತು.
ಬಿಸಿಸಿಐ ಈಗಾಗಲೇ ಮಾಧ್ಯಮ ಹಕ್ಕು ಮಾರಾಟದಿಂದ 951 ಕೋಟಿ ರೂ. ಹಾಗೂ 5 ತಂಡಗಳ ಮಾರಾಟದಿಂದ 4,700 ಕೋಟಿ ರೂ. ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next