Advertisement

IPL;ರೋಚಕ ಪಂದ್ಯದಲ್ಲಿ ಗುಜರಾತ್ ವಿರುದ್ಧ ಪಂಜಾಬ್ ಗೆ ಜಯ

11:14 PM Apr 04, 2024 | Team Udayavani |

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಜಯ ಸಾಧಿಸಿದೆ.

Advertisement

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ 4 ವಿಕೆಟ್ ನಷ್ಟಕ್ಕೆ 199 ರನ್ ಗಳ ಉತ್ತಮ ಮೊತ್ತ ಕಲೆ ಹಾಕಿತು. ಅತ್ಯಮೋಘ ಆಟವಾಡಿದ ನಾಯಕ ಶುಭಮಂ ಗಿಲ್ 89 ರನ್ ಗಳಿಸಿ (48 ಎಸೆತ) ಔಟಾಗದೆ ಉಳಿದರು. 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ವಿಲಿಯಮ್ಸನ್ 26, ಸಾಯಿ ಸುದರ್ಶನ್ 33, ವಿಜಯ್ ಶಂಕರ್ 8, ರಾಹುಲ್ ತೆವಾಟಿಯಾ 23 ರನ್ ಗಳಿಸಿ ಔಟಾಗದೆ ಉಳಿದರು.

ಗುರಿ ಬೆನ್ನಟ್ಟಿದ ಪಂಜಾಬ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಶಶಾಂಕ್ ಸಿಂಗ್ 29 ಎಸೆತಗಳಲ್ಲಿ 61 ರನ್ ಗಳಿಸಿ ಗೆಲುವಿನ ದಡ ಸೇರಿಸಿ ಔಟಾಗದೆ ಉಳಿದರು. ಜಾನಿ ಬೈರ್ಸ್ಟೋವ್ 22, ಪ್ರಭಾಸಿಮ್ರಾನ್ ಸಿಂಗ್ 35, ಅಶುತೋಷ್ ಶರ್ಮ 31 ರನ್ ಕೊಡುಗೆ ನೀಡಿದರು. ಪಂಜಾಬ್ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next