Advertisement

IPL;ಪಂಜಾಬ್ ವಿರುದ್ಧ ಲಕ್ನೋಗೆ 21 ರನ್‌ಗಳ ಜಯ

11:23 PM Mar 30, 2024 | Team Udayavani |

ಲಕ್ನೋ:ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 21 ರನ್‌ಗಳ ಜಯ ಸಾಧಿಸಿತು.

Advertisement

ಲಕ್ನೋ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 8 ವಿಕೆಟ್ ನಷ್ಟಕ್ಕೆ 199 ರನ್ ಕಲೆ ಹಾಕಿತು. ಡಿ ಕಾಕ್ 54, ತಂಡದ ನಾಯಕನಾಗಿದ್ದ ಪೂರನ್ 42 ರನ್ , ಕೃನಾಲ್ ಪಾಂಡ್ಯ ಔಟಾಗದೆ 43 ರನ್ ಗಳಿಸಿದರು. ಸ್ಯಾಮ್ ಕರ್ರಾನ್ 28 ಕ್ಕೆ 3 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಪಂಜಾಬ್ ಆರಂಭದಲ್ಲಿ ಉತ್ತಮ ಆಟವಾಡಿತು. 11.4 ಓವರ್ ಗಳಲ್ಲಿ 102 ರನ್ ಗಳಿಸಿದ್ದ ವೇಳೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಟಕೀಯ ಕುಸಿತ ಕಂಡು ಸೋಲು ಅನುಭವಿಸಿತು.ನಾಯಕ ಶಿಖರ್ ಧವನ್ 70 ರನ್ ಗಳಿಸಿದರೂ ವ್ಯರ್ಥವಾಯಿತು. ಜಾನಿ ಬೇರ್ಸ್ಟೋವ್ 42, ಪ್ರಭಾಸಿಮ್ರಾನ್ ಸಿಂಗ್ 19, ಲಿಯಾಮ್ ಲಿವಿಂಗ್ಸ್ಟೋನ್ 28 ರನ್ ಗಳಿಸಿದರು. ಮಯಾಂಕ್ ಯಾದವ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಮೊಹ್ಸಿನ್ ಖಾನ್ 2 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next