Advertisement

Muslim League ಹೇಳಿಕೆ: ಪಿಎಂ ಮೋದಿ ವಿರುದ್ಧ ‘ಕೈ’ ದೂರು ದಾಖಲು

01:06 AM Apr 09, 2024 | Team Udayavani |

ಹೊಸದಿಲ್ಲಿ: “ಕಾಂಗ್ರೆಸ್‌ ಪ್ರಣಾಳಿಕೆ ಮುಸ್ಲಿಂ ಲೀಗ್‌ ಮುದ್ರೆಯನ್ನು ಹೊಂದಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗ ಸೋಮವಾರ ಚುನಾವಣ ಆಯೋಗಕ್ಕೆ ದೂರು ನೀಡಿದೆ. ಮೋದಿ ಅವರ ವಿರುದ್ಧ 2 ಸೇರಿ ಒಟ್ಟು 6 ದೂರು ನೀಡಲಾಗಿದೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, “ನನ್ನ ಸಹೋದ್ಯೋಗಿಗಳಾದ ಮುಕುಲ್‌ ವಾಸ್ನಿಕ್‌, ಸಲ್ಮಾನ್‌ ಖುರ್ಷಿದ್‌, ಪವನ್‌ ಖೇರಾ, ಗುರುದೀಪ್‌ ಸಪ್ಪಲ್‌ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗ ಸಾಂವಿಧಾನಾತ್ಮಕವಾಗಿ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ. “ಮೋದಿ ತಮ್ಮ ಚುನಾವಣ ಭಾಷಣದಲ್ಲಿ ನಮ್ಮ ಪ್ರಣಾಳಿಕೆಯ ಬಗ್ಗೆ ಮಾತನಾಡಿರುವುದು ಬೇಸರ ಉಂಟುಮಾಡಿದೆ. ನೀವು (ಮೋದಿ) ಭಿನ್ನಾಭಿಪ್ರಾಯ ಹೊಂದಿರಬಹುದು. ಅದನ್ನು ನೀವು ಟೀಕಿಸಬಹುದು. ಆದರೆ ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

ಮುಸ್ಲಿಂ ಲೀಗ್‌ಗೆ ಬಿಜೆಪಿ ಬೆಂಬಲ: ಖರ್ಗೆ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತದ ವಿರುದ್ಧ ಬ್ರಿಟಿಷರು ಹಾಗೂ ಮುಸ್ಲಿಂ ಲೀಗ್‌ಗೆ ವಾಸ್ತವವಾಗಿ ಬೆಂಬಲ ನೀಡಿದ್ದು, ಬಿಜೆಪಿಯ ಸೈದ್ಧಾಂತಿಕ ಪೂರ್ವಜರು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಈಗಲೂ ಕಾಂಗ್ರೆಸ್‌ನ ನ್ಯಾಯ ಪತ್ರದ ವಿರುದ್ಧ ಮುಸ್ಲಿಮರನ್ನು ಬಿಜೆಪಿ ಪ್ರಚೋದಿಸುತ್ತಿದೆ ಎಂದು ಹೇಳಿದರು. 1940ರಲ್ಲಿ ಬಂಗಾಳ, ಸಿಂಧ್‌ ಮತ್ತು ವಾಯುವ್ಯ ಪ್ರಾಂತಗಳಲ್ಲಿ ಮುಸ್ಲಿಂ ಲೀಗ್‌ ಜತೆ ಸೇರಿ ಶ್ಯಾಂ ಪ್ರಸಾದ್‌ ಮುಖರ್ಜಿ ಅವರು ಸರಕಾರ ಸ್ಥಾಪನೆ ಮಾಡಿದ ವಿಷಯವನ್ನು ಖರ್ಗೆ ಈ ವೇಳೆ ಪ್ರಸ್ತಾಪಿವಿದ್ದಾರೆ.

ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತದ ಭಾಗ: ಪ್ರಧಾನಿ ಮೋದಿ
ಇಟಾನಗರ: ಅರುಣಾಚಲ ಪ್ರದೇಶ ಈ ಮೊದಲು ಭಾರತದ ಭಾಗವಾಗಿತ್ತು. ಈಗಲೂ ಭಾರತದ ಭಾಗವೇ ಆಗಿದೆ. ಮುಂದೆಯೂ ಭಾರತದ ಭಾಗವೇ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಕೆಲವು ಹೆಸರುಗಳನ್ನು ಚೀನ ಮರುನಾಮಕರಣ ಮಾಡಿದೆ ಎಂಬ ಆರೋಪದ ನಡುವೆಯೇ ಪ್ರಧಾನಿ ಈ ಮಾತುಗಳನ್ನು ಆಡಿದ್ದಾರೆ. ಅಸ್ಸಾಂನ ಮಾಧ್ಯ ಮವೊಂದರ ಜತೆ ಮಾತನಾಡಿರುವ ಅವರು, ಅರು ಣಾಚಲ ಪ್ರದೇಶಕ್ಕೆ ಹೇಗೆ ಸೂರ್ಯನ ಮೊದಲ ಕಿರಣಗಳು ತಲುಪುತ್ತದೆಯೋ ಅದೇ ರೀತಿ ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳು ಈ ಹಿಂದೆಂ ದಿಗಿಂತಲೂ ಮೊದಲೇ ತಲುಪುತ್ತಿದೆ. ಅರುಣಾಚಲ ಪ್ರದೇಶದಲ್ಲಿ 35,000 ಕುಟುಂಬಗಳು ಪಕ್ಕಾ ಮನೆಯನ್ನು ಪಡೆದುಕೊಂಡಿವೆ ಎಂದರು.

ಕೈ’ ಹಾಗಲಕಾಯಿ ಇದ್ದಂತೆ, ಸಕ್ಕರೆ ಹಾಕಿದ್ರೂ ಕಹಿ ಹೋಗಲ್ಲ: ಮೋದಿ
ಚಂದ್ರಾಪುರ್‌/ರಾಯು³ರ್‌: ಕಾಂಗ್ರೆಸ್‌ ಪಕ್ಷವನ್ನು ಹಾಗಲಕಾಯಿಗೆ ಹೋಲಿಸಿರು ಪ್ರಧಾನಿ ನರೇಂದ್ರ ಮೋದಿ, ತುಪ್ಪ ಅಥವಾ ಸಕ್ಕರೆ ಜತೆ ಮಿಶ್ರಣ ಮಾಡಿದರೂ ಹಾಗಲಕಾಯಿಯ ಕಹಿ ಗುಣ ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ತನ್ನ ಕುಕೃತ್ಯಗಳಿಂದಾಗಿ ಕಾಂಗ್ರೆಸ್‌ ಜನರ ಬೆಂಬಲವನ್ನು ಕಳೆದುಕೊಂಡಿದೆ ಎಂದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ರಾಯು³ರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿ, 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ಎಂದೂ ಬಡವರ ನೋವಿಗೆ ಸ್ಪಂದಿಸಲಿಲ್ಲ. ಮೋದಿ ನೇತೃತ್ವದ ಸರಕಾರದ ಪ್ರಯತ್ನದಿಂದಾಗಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆಂದು ಹೇಳಿದರು.

ಇಂದು, ನಾಳೆ ಮೋದಿ ತ.ನಾಡು ಭೇಟಿ: ಮಂಗಳವಾರದಿಂದ 2 ದಿನಗಳ ಕಾಲ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಪ್ರಚಾರ ರ್ಯಾಲಿ ನಡೆಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾಹಿತಿ ನೀಡಿದ್ದಾರೆ. ಮಂಗಳವಾರ ಸಂಜೆ 6 ಗಂಟೆಗೆ ಚೆನ್ನೈಯಲ್ಲಿ ರೋಡ್‌ ಶೋ ನಡೆಸಲಿದ್ದು, ಬುಧವಾರ 2 ಸಾರ್ವಜನಿಕ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next