Advertisement

WPL; ಗುಜರಾತ್‌ಗೆ ಸೋಲುಣಿಸಿ ಫೈನಲ್‌ಗೆ ಲಗ್ಗೆ ಹಾಕಿದ ಡೆಲ್ಲಿ

12:26 AM Mar 14, 2024 | Team Udayavani |

ಹೊಸದಿಲ್ಲಿ: ವನಿತಾ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ನೇರವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಬುಧವಾರದ ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್‌ ಅಂತರದಿಂದ ಗುಜರಾತ್‌ಗೆ ಸೋಲುಣಿಸಿ ತನ್ನ ಅಂಕವನ್ನು 12ಕ್ಕೆ ಏರಿಸಿಕೊಂಡಿತು.

Advertisement

ಶುಕ್ರವಾರದ ಎಲಿಮಿನೇಟರ್‌ ಪಂದ್ಯ ದಲ್ಲಿ ಮುಂಬೈ-ಆರ್‌ಸಿಬಿ ಮುಖಾ ಮುಖೀ ಆಗಲಿವೆ. ಇಲ್ಲಿ ಗೆದ್ದ ತಂಡ ರವಿವಾರದ ಫೈನಲ್‌ನಲ್ಲಿ ಡೆಲ್ಲಿಯನ್ನು ಎದುರಿಸಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ 9 ವಿಕೆಟಿಗೆ ಕೇವಲ 126 ರನ್‌ ಗಳಿಸಿತು. ಜವಾಬಿತ್ತ ಡೆಲ್ಲಿ 13.1 ಓವರ್‌ಗಳಲ್ಲಿ 3 ವಿಕೆಟಿಗೆ 129 ರನ್‌ ಬಾರಿಸಿತು. ಚೇಸಿಂಗ್‌ ವೇಳೆ ಶಫಾಲಿ ವರ್ಮ 37 ಎಸೆತಗಳಿಂದ 71 ರನ್‌ (7 ಬೌಂಡರಿ, 5 ಸಿಕ್ಸರ್‌), ಜೆಮಿಮಾ ರೋಡ್ರಿಗಸ್‌ ಅಜೇಯ 38 ರನ್‌ ಹೊಡೆದರು.

ಮರಿಜಾನ್‌ ಕಾಪ್‌, ಶಿಖಾ ಪಾಂಡೆ ಮತ್ತು ಮಿನ್ನು ಮಣಿ ಗುಜರಾತ್‌ಗೆ ಕಂಟಕವಾಗಿ ಪರಿಣಮಿಸಿದರು. ಮೂವರೂ ತಲಾ 2 ವಿಕೆಟ್‌ ಉರು ಳಿಸಿದರು. 42 ರನ್‌ ಮಾಡಿದ ಭಾರತಿ ಫ‌ೂಲ್ಮಾಲಿ ಅವರದು ಸರ್ವಾಧಿಕ 42 ರನ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next