Advertisement

Women’s Premier League; ಗುಜರಾತ್‌ ತಂಡದ ವಿಶೇಷ ಅಭಿಮಾನಿ

12:40 AM Mar 06, 2024 | Team Udayavani |

ಹೊಸದಿಲ್ಲಿ:ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ ವಿಶೇಷ ಬೆಂಬಲಿಗರೊಬ್ಬ ರನ್ನು ಗಳಿಸಿದೆ. ಇವರು ಯಾರು ಗೊತ್ತೇ? ಪ್ಯಾರಾ ಕ್ರಿಕೆಟರ್‌ ಆಮಿರ್‌ ಹುಸೇನ್‌ ಲೋನ್‌.

Advertisement

ಎರಡೂ ಕೈಗಳನ್ನು ಹೊಂದಿಲ್ಲದ ಆಮಿರ್‌ ಹುಸೇನ್‌ ಅವರಿಗೆ ಅದಾನಿ ಗ್ರೂಪ್‌ ಮುಖ್ಯ ಸ್ಪಾನ್ಸರ್‌ ಆಗಿದೆ. ಇದರ ಒಡೆತನದ ಗುಜರಾತ್‌ ಜೈಂಟ್ಸ್‌ ತಂಡವನ್ನು ಬೆಂಬಲಿಸಲು ಅವರು ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಕಾಣಿಸಿಕೊಂಡಿದ್ದರು.

ಕಾಲಿನ ನೆರವಿನಿಂದ ಗುಜರಾತ್‌ ಜೈಂಟ್ಸ್‌ ತಂಡದ ಧ್ವಜವನ್ನು ಬೀಸುತ್ತಿದ್ದುದು ಕಂಡುಬಂತು.
“ನಾನು ಮೊದಲ ಸಲ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದೇನೆ. ಗುಜರಾತ್‌ ಜೈಂಟ್ಸ್‌ ನನ್ನನ್ನು ಆಹ್ವಾನಿಸಿದ್ದಕ್ಕೆ ಬಹಳ ಸಂತೋಷವಾಗಿದೆ. ವಿರಾಟ್‌ ಕೊಹ್ಲಿ ನನ್ನ ಪಾಲಿನ ಐಡಲ್‌. ತರನ್ನುಮ್‌ ಪಠಾಣ್‌ ನನ್ನ ನೆಚ್ಚಿನ ಕ್ರಿಕೆಟರ್‌’ ಎಂಬುದಾಗಿ ಆಮಿರ್‌ ಹುಸೇನ್‌ ಹೇಳಿದರು.

“ಆಮಿರ್‌ ನಮ್ಮ ತಂಡವನ್ನು ಭೇಟಿ ಮಾಡಿರುವುದು ಅತ್ಯಂತ ಖುಷಿಯ ಸಂಗತಿ. ಅವರ ಕ್ರಿಕೆಟ್‌ ಕಥನ ಎಲ್ಲರಿಗೂ ದೊಡ್ಡದೊಂದು ಸ್ಫೂರ್ತಿ’ ಎಂದು ಗುಜರಾತ್‌ ತಂಡದ ಮೆಂಟರ್‌ ಮಿಥಾಲಿ ರಾಜ್‌ ಹೇಳಿದರು.
ಕಾಶ್ಮೀರದವರಾದ ಆಮಿರ್‌ ಹುಸೇನ್‌, ತಂದೆಯ ಮರದ ಮಿಲ್‌ನಲ್ಲಿ ಸಂಭವಿಸಿದ ಭೀಕರ ಅವಘ ಡವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಆಗ ಆಮಿರ್‌ ವಯಸ್ಸು ಕೇವಲ 8 ವರ್ಷ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next