Advertisement

WPL  ವರ್ಣರಂಜಿತ ಚಾಲನೆ :ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈಗೆ ರೋಚಕ ಗೆಲುವು

11:19 PM Feb 23, 2024 | Team Udayavani |

ಬೆಂಗಳೂರು: ವನಿತಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಎರಡನೇ ಚರಣಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ಲಭಿಸಿದೆ. ಉದ್ಘಾಟನ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರಾದ ಶಾರುಖ್‌ ಖಾನ್‌, ಶಾಹಿದ್‌ ಕಪೂರ್‌, ಸಿದ್ಧಾರ್ಥ್ ಮಲ್ಹೋತ್ರ, ವರುಣ್‌ ಧವನ್‌, ಕಾರ್ತಿಕ್‌ ಆರ್ಯನ್‌, ಟೈಗರ್‌ ಶ್ರಾಫ್ ಮೊದಲಾದವರು ಗಮನ ಸೆಳೆದರು.

Advertisement

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಬಾದ್‌ಶಾ ಶಾರುಖ್‌, ಝೂಮೆ ಜೋ ಪಠಾಣ್‌ ಹಾಡಿಗೆ ಸ್ಟೆಪ್ಸ್‌ ಹಾಕಿ ನೆರದ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಉಳಿದ ನಟರೂ ಮನೋರಂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವರ್ಣರಂಜಿತ ಸುಡು ಮದ್ದುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ರಂಗೇರಿಸಿತು.

ಮುಂಬೈ ಡೆಲ್ಲಿ ವಿರುದ್ಧ ಮುಂಬೈಗೆ ರೋಚಕ ಗೆಲುವು

ಮೊದಲ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿತು. 172 ರನ್‌ ಗಳಿಸುವ ಸವಾಲು ಪಡೆದ ಮುಂಬೈ ಕೊನೆಯ ಎಸೆತದ ವರೆಗೆ ಸಾಗಿದ ರೋಚಕ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಅಲೀಸ್‌ ಕ್ಯಾಪ್ಸೆ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡವು ಐದು ವಿಕೆಟಿಗೆ 171 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. 19ರ ಹರೆಯದ ಕ್ಯಾಪ್ಸೆ 53 ಎಸೆತಗಳಿಂದ 75 ರನ್‌ ಹೊಡೆದಿದ್ದರು.

Advertisement

ಗುರಿ ಬೆನ್ನಟ್ಟಿದ ಮುಂಬೈ ಪರ ಯಾಸ್ತಿಕಾ ಭಾಟಿಯಾ 57,ನಾಯಕಿ ಹರ್ಮನ್‌ಪ್ರೀತ್ ಕೌರ್ 55 ರನ್ ಗಳ ಅಮೋಘ ಆಟವಾಡಿದರು. ಕೊನೆಯ ಎಸೆತದಲ್ಲಿ ಐದು ರನ್ ಅಗತ್ಯವಿತ್ತು, ಬ್ಯಾಟಿಂಗ್ ಗೆ ಆಗಮಿಸಿದ್ದ ಸಂಜನಾ ಸಿಕ್ಸರ್ ಬಾರಿಸಿ ನಾಲ್ಕು ವಿಕೆಟ್ ಗಳ ಗೆಲುವು ತಂದುಕೊಟ್ಟರು.

ಬೆಂಗಳೂರಿಗೆ ಯುಪಿ ಸವಾಲು
ಮಹಿಳಾ ಐಪಿಎಲ್‌ನ ಎರಡನೇ ಪಂದ್ಯವಾಗಿ ಶನಿವಾರ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡವು ಯುಪಿ ವಾರಿಯರ್ ಸವಾಲು ಸ್ವೀಕರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ಈ ಪಂದ್ಯ ನಡೆಯಲಿದ್ದು, ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next