Advertisement

ದಿಲ್ಲಿಯ ಕರ್ತವ್ಯ ಪಥದಲ್ಲಿ 26ಕ್ಕೆ ಅನಾವರಣಗೊಳ್ಳಲಿದೆ ನಾರೀಶಕ್ತಿ!

12:25 AM Jan 23, 2023 | Team Udayavani |

ಹೊಸದಿಲ್ಲಿ: ಜ.26ರಂದು ಕರ್ತವ್ಯಪಥದಲ್ಲಿ ನಡೆಯಲಿರುವ 74ನೇ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಈ ಬಾರಿ ಬಹುತೇಕ ರಾಜ್ಯಗಳ ಸ್ತಬ್ಧಚಿತ್ರ ನಾರೀಶಕ್ತಿಯನ್ನು ಪ್ರದರ್ಶಿಸಲಿದೆ. ರಾಜಪಥವನ್ನು ಕರ್ತವ್ಯ ಪಥವೆಂದು ಹೊಸತಾಗಿ ಹೆಸರು ಇರಿಸಿದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದೆ. ಭಾರತದ ಸಾಂಸ್ಕೃತಿಕ ಪರಂಪರೆ, ಆರ್ಥಿಕ, ಸಾಮಾಜಿಕ ಪ್ರಗತಿಯನ್ನು ಬಿಂಬಿಸುವ ಪರೇಡ್‌ನ‌ಲ್ಲಿ ಈ ಬಾರಿ ದೇಶದ ನಾರಿಶಕ್ತಿಯ ಪ್ರದರ್ಶನ ವಾಗಲಿದೆ. ಕೆಲವೊಂದು ಈಗಾಗಲೇ ಸಿದ್ಧಗೊಂಡಿದ್ದರೆ, ಇನ್ನು ಕೆಲವು ಸಿದ್ಧತೆಯ ಹಂತದಲ್ಲಿವೆ.

Advertisement

ದುರ್ಗಾಪೂಜೆ ಪ್ರದರ್ಶನ
ಯುನೆಸ್ಕೋ ಸಾಂಸ್ಕೃತಿಕ ಪರಂಪರೆಗೆ ಸೇರ್ಪಡೆ ಗೊಂಡಿರುವ ಪಶ್ಚಿಮ ಬಂಗಾಲದ ದುರ್ಗಾಪೂಜೆಯನ್ನೇ ಈ ಬಾರಿ ಸ್ತಬ್ಧಚಿತ್ರವಾಗಿ ಪಶ್ಚಿಮ ಬಂಗಾಲ ಪ್ರದರ್ಶಿಸಲಿದೆ. ಈ ಮೂಲದ ದೇಶದ ನಾರೀಶಕ್ತಿಯ ವಿರಾಟ ರೂಪವನ್ನು ಪ್ರದರ್ಶಿಸಲು ನಿರ್ಧರಿಸಿದೆ.

ಯಾವೆಲ್ಲ ರಾಜ್ಯ ಭಾಗಿ?
ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್‌, ಗುಜರಾತ್‌, ಪಶ್ಚಿಮ ಬಂಗಾಲ ಸಹಿತ ಇನ್ನೂ ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿವೆ.

ಯಾವ ಸಚಿವಾಲಯದಿಂದ ಎಷ್ಟು ?
ಸರಕಾರದ ವಿವಿಧ ಸಚಿವಾಲಯಗಳಿಂದ ಒಟ್ಟು 6 ಸ್ತಬ್ಧ ಚಿತ್ರಗಳು ಪ್ರದರ್ಶ ನಗೊಳ್ಳಲಿವೆ. ಕೇಂದ್ರ ಗೃಹ ಸಚಿವಾಲಯದ ಎನ್‌ಸಿಬಿ , ಸಿಎಪಿಎಫ್ನಿಂದ ತಲಾ 1 ಸ್ತಬ್ಧ ಚಿತ್ರ. ಕೃಷಿ ಸಚಿವಾಲಯ ,ಬುಡಕಟ್ಟು ವ್ಯವಹಾರ ಹಾಗೂ ಸಂಸ್ಕೃತಿ ಸಚಿವಾಲಯ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದಿಂದ ತಲಾ 1 ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next