ಮುಂಬೈ: ಬಿಸಿಸಿಐ ಈಗಾಗಲೇ ಮಹಿಳಾ ಐಪಿಎಲ್ ನಡೆಸಲು ಸಿದ್ಧತೆ ನಡೆಸಿದೆ. ಈ ಸ್ಪರ್ಧೆಯಲ್ಲಿ ಐದು ತಂಡಗಳು ಪಾಲ್ಗೊಳ್ಳಲಿದ್ದು, ಖರೀದಿಗೆ ಟೆಂಡರ್ ಬಿಡುಗಡೆ ಮಾಡಲಾಗಿದೆ.
ಫೆಬ್ರವರಿಯಲ್ಲಿ ನಡೆಯುವ ಹರಾಜಿನ ಮೂಲಕ ಆಟಗಾರ್ತಿಯರನ್ನು ಫ್ರಾಂಚೈಸಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಭಾರತೀಯ ಆಟಗಾರ್ತಿಯರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಲು ಜ.26 ಅಂತಿಮದಿನವಾಗಿದೆ.
ವನಿತಾ ಐಪಿಎಲ್ ಮಾ.3ರಿಂದ 26ರವರೆಗೆ ನಡೆಯುವ ನಿರೀಕ್ಷೆಯಿದೆ. ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ವನಿತಾ ತಂಡವನ್ನು ರಚಿಸುವ ಬಗ್ಗೆ ಆಸಕ್ತಿ ವಹಿಸಿವೆ ಎನ್ನಲಾಗಿದೆ.
ಇದನ್ನೂ ಓದಿ:‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರ ವಿಮರ್ಶೆ: ಫ್ರೇಮ್‌ನೊಳಗೆ ಸೆರೆಯಾದ ಪುಟ್ಟ ಬದುಕು
ಟೆಸ್ಟ್ ಅಥವಾ ಏಕದಿನ ಪಂದ್ಯವನ್ನಾಡಿದ ಆಟಗಾರ್ತಿಯರ ಮೂಲ ಬೆಲೆಯನ್ನು 30 ಲಕ್ಷ ರೂ., 40 ಲಕ್ಷ ರೂ. ಮತ್ತು 50 ಲಕ್ಷ ರೂ. ಹಾಗೂ ಇತರ ಆಟಗಾರ್ತಿಯರ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ.