Advertisement

Women’s Hockey: ಭಾರತಕ್ಕೆ ಅಮೆರಿಕ ಸವಾಲು

11:37 PM Feb 08, 2024 | Team Udayavani |

ಭುವನೇಶ್ವರ: ಭಾರತೀಯ ವನಿತಾ ಹಾಕಿ ತಂಡವು ಶುಕ್ರವಾರ ನಡೆ ಯುವ ಎಫ್ಐಎಚ್‌ ಪ್ರೊ ಹಾಕಿ ಲೀಗ್‌ನ
ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ. ಸತತ 3 ಪಂದ್ಯಗಳಲ್ಲಿ ಸೋತಿರುವ ಭಾರತವು ಈ ಪಂದ್ಯದಲ್ಲಿ ಗೆಲ್ಲಲು ಗರಿಷ್ಠ ಪ್ರಯತ್ನ ನಡೆಸಲಿದೆ.

Advertisement

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫ‌ಲವಾದ ಬಳಿಕ ಸವಿತಾ ಪೂನಿಯಾ ನೇತೃತ್ವದ ವನಿತಾ ಹಾಕಿ ತಂಡದ ನಿರ್ವಹಣೆ ಇತ್ತೀಚೆಗಿನ ದಿನ ಗಳಲ್ಲಿ ಕಳಪೆಯಾಗುತ್ತಿದೆ. ಭಾರತ ಚೀನ ವಿರುದ್ಧ 1-2ರಿಂದ ಸೋತಿದ್ದ ಭಾರತ ಆಬಳಕ ನೆದರ್ಲೆಂಡ್ಸ್‌ ವಿರುದ್ಧ 1-3 ಗೋಲುಗಳಿಂದ ಶರಣಾಯಿತು. ಬಲಿಷ್ಠ ಆಸ್ಟ್ರೇಲಿಯ ವಿರುದ್ಧ 0-3 ಗೋಲುಗಳಿಂದ ಭಾರತ ಸೋತು ನಿರಾಶೆ ಅನುಭವಿಸಿತು.

ಆರಂಭದ ಕೆಲವು ಪಂದ್ಯಗಳಲ್ಲಿ ನಾವು ಸೋತರೂ ಬಹಳಷ್ಟು ತಪ್ಪುಗ ಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾ ಗಿದೆ. ಮುಂದಿನ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಲು ಪ್ರಯತ್ನಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next