Advertisement

Women’s Games: ಮಂಗಳೂರು ವಿವಿ 7ನೇ ಬಾರಿ ಚಾಂಪಿಯನ್‌

11:52 PM Dec 30, 2023 | Team Udayavani |

ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆದ 83ನೇ ಅಖಿಲ ಭಾರತ ಅಂತರ್‌ ವಿವಿ ಮಹಿಳಾ ಕ್ರೀಡಾಕೂಟದಲ್ಲಿ 7 ಪದಕಗಳೊಂದಿಗೆ 56 ಅಂಕ ಪಡೆದ ಮಂಗಳೂರು ವಿಶ್ವವಿದ್ಯಾಲಯ ತಂಡ 7ನೇ ಬಾರಿ ಚಾಂಪಿಯನ್‌ ಆಗಿದೆ. ಪದಕ ವಿಜೇತರೆಲ್ಲರೂ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ವಿಚಾರ ಎಂದು ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

Advertisement

ಮಹಿಳಾ ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ ಮಂಗಳೂರು ವಿವಿಯ 33 ಕ್ರೀಡಾಪಟುಗಳ ತಂಡದಲ್ಲಿ 26 ಕ್ರೀಡಾಪಟುಗಳು ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಇಲ್ಲಿನ 6 ವಿದ್ಯಾರ್ಥಿನಿಯರು ಸೇರಿ 2 ಚಿನ್ನ, ಒಂದು ಬೆಳ್ಳಿ, 4 ಕಂಚಿನ ಪದಕ ಜಯಿಸಿದಿದ್ದಾರೆ. ಅಂಜಲಿ ಸಿ. ಅವರದು ಅವಳಿ ಪದಕ ಸಾಧನೆ. ಭವಾನಿ ಯಾದವ್‌ ಉದ್ದ ಜಿಗಿತದಲ್ಲಿ ಚಿನ್ನ, ತನುಶ್ರೀ ಹೆಪ್ಟತ್ಲಾನ್‌ನಲ್ಲಿ ಚಿನ್ನ, ಅಂಜಲಿ ಸಿ. 100 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ, ಟ್ರಿಪಲ್‌ ಜಂಪ್‌ನಲ್ಲಿ ಕಂಚು, ಅಂಜಲಿ ಶಾಟ್‌ಪುಟ್‌ನಲ್ಲಿ ಕಂಚು, ಶ್ರೀದೇವಿಕಾ ಉದ್ದಜಿಗಿತದಲ್ಲಿ ಕಂಚು, ಶಿವಾನಿ ಗಾಯಕ್ವಾಡ್‌ 400 ಮೀ. ಓಟದಲ್ಲಿ ಕಂಚು, ಸಾಕ್ಷಿ ಶರ್ಮಾ ಜಾವೆಲಿನ್‌ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಆಳ್ವಾಸ್‌ನ ಎಲ್ಲ 26 ಕ್ರೀಡಾಪಟುಗಳು ಆಳ್ವಾಸ್‌ ಕ್ರೀಡಾ ದತ್ತು ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದಾರೆ.

ನಗದು ಪುರಸ್ಕಾರ
ಈ ಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ರೂ10,000 ರೂ., ಬೆಳ್ಳಿ ಜಯಿಸಿದವರಿಗೆ 7,500 ರೂ. ಹಾಗೂ ಕಂಚಿನ ಪದಕ ಪಡೆದವರಿಗೆ 5,000 ರೂ. ನಗದು ಬಹುಮಾನವನ್ನು ಸಂಸ್ಥೆಯ ವತಿಯಿಂದ ನೀಡುವು ದಾಗಿ ಆಳ್ವ ಅವರು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next