Advertisement
ಮೂಲತಃ ಶಿರಸಿಯವರಾದರೂ ಸ್ವಾತಂತ್ರ್ಯ ಹೋರಾಟಗಾರ ನರಸಿಂಹ ದಾಬಡೆ ಅವರ ಸೊಸೆಯಾಗಿ ಧಾರವಾಡಕ್ಕೆ ಬಂದ ಶಾರದಾ ಅವರು ಬಡ ಕೂಲಿ ಹೆಣ್ಣು ಮಕ್ಕಳಿಗೆಆಸರೆಯಾಗಿದ್ದಾರೆ. ಗ್ರಾಪಂ, ಜಿಪಂಗಳ ಮೆಟ್ಟಿಲೇರಿನರೇಗಾ ಕೂಲಿ ಕೊಡಿಸಿದ್ದಾರೆ.ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗಾಗಿ ಧರಣಿ, ಹೋರಾಟಕ್ಕೂಸದಾ ಸಿದ್ಧರಿದ್ದಾರೆ. ಮಳೆನೀರು ಸಾಕ್ಷರತೆ, ಸಾವಯವ ಕೃಷಿ, ಗ್ರಾಮೀಣ ಮಹಿಳೆಯರ ಆರೋಗ್ಯ, ದೇಶಿ ಔಷಧಗಳು ಹೀಗೆ ಹಳ್ಳಿಗಳ ಪರಿವರ್ತನೆಗಾಗಿ ಎಲೆಮರೆಯ ಕಾಯಿಯಂತೆ 25 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ದುಡಿದು ಬಂದು ಕೂಡಿಟ್ಟ ಕೂಲಿ ಹಣವನ್ನು ಕುಡಿತಕ್ಕೆ ಬಳಸುವವರ ಬಗ್ಗೆ ಕಿಡಿ ಕಾರುವ ಇವರು, ಹಳ್ಳಿಗಳನ್ನು ಪಾನಮುಕ್ತ ಮಾಡಲು ಶ್ರಮಿಸಿ ಯಶಸ್ವಿಯಾಗಿದ್ದಾರೆ. ಗ್ರಾಮೋದ್ಧಾರಕ್ಕಾಗಿ ಜಾಗೃತಿ ಎಂಬ ಸಂಸ್ಥೆ ಹುಟ್ಟು ಹಾಕಿದ್ದಾರೆ.
Related Articles
Advertisement
ಹುಬ್ಬಳ್ಳಿ: ಜೀವನದಲ್ಲಿ ಇರುವ ಎಲ್ಲ ಕಷ್ಟಗಳಿಂದ ಪಾರಾಗಬೇಕು, ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಬೇಕೆಂಬ ಛಲದೊಂದಿಗೆ ಕಳೆದ ಐದು ವರ್ಷಗಳಿಂದ ಮಹಿಳೆಯೊಬ್ಬಳು ಆಟೋ ರಿಕ್ಷಾ ಚಾಲನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹಳೇಹುಬ್ಬಳ್ಳಿ ಈಶ್ವರ ನಗರದ ಹೂಗಾರ ಪ್ಲಾಟ್ ನಿವಾಸಿ ಮಂಜುಳಾ ಸಿದ್ಧಲಿಂಗಯ್ಯ ಹಿರೇಮಠ ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪೂರ್ತಿ ಪ್ರಮಾಣದಲ್ಲಿ ಆಟೋ ಚಾಲನೆ ಮಾಡುತ್ತ ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ಪತಿ ಸಿದ್ಧಲಿಂಗಯ್ಯ ಹಿರೇಮಠ ಅವರು ಕೂಡಾ ಆಟೋ ಚಾಲನೆ ಮಾಡುತ್ತಿದ್ದು, ಕಳೆದ ಐದು ವರ್ಷಗಳಿಂದ ಬೆಳಗ್ಗೆ 5 ರಿಂದ 7 ಗಂಟೆವರೆಗೆ ಆಟೋ ಚಾಲನೆ ಮಾಡಿ ನಂತರ ಪತಿಗೆ ಆಟೋ ಚಾಲನೆ ಮಾಡಲು ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಪತಿ ಅಪಘಾತವೊಂದರದಲ್ಲಿ ಕಾಲು ಮುರಿದುಕೊಂಡಿದ್ದು, ಅಂದಿನಿಂದ ಪೂರ್ತಿ ಪ್ರಮಾಣದಲ್ಲಿ ಆಟೋ ಚಾಲನೆ ಮಾಡುವ ಮೂಲಕ ಜೀವನ ಬಂಡಿ ಸಾಗಿಸುತ್ತಿದ್ದಾರೆ.
ಮನೆಯಲ್ಲಿ ಪತಿ ಸಿದ್ದಲಿಂಗಯ್ಯ ಹಿರೇಮಠ, ಮಗಳು ಅಪೂರ್ವ ಹಿರೇಮಠ ಹಾಗೂ ನಾನು ವಾಸವಾಗಿದ್ದೇವೆ. ಆಟೋ ರಿಕ್ಷಾದಿಂದಲೇ ನಮ್ಮ ಮನೆಯ ಜೀವನ ಬಂಡಿ ಸಾಗಿಸಲಾಗುತ್ತಿದೆ.
ಪತಿಯ ಅಪಘಾತದ ನಂತರ ನಾನೇ ಸ್ವತಃ ಆಟೋ ಚಾಲನೆ ಮಾಡುತ್ತಿದ್ದು, ಕಳೆದ 2 ವರ್ಷಗಳಿಂದ ಪೂರ್ತಿ ಪ್ರಮಾಣದಲ್ಲಿ ಆಟೋ ಚಾಲನೆ ಮಾಡುತ್ತ ಕುಟುಂಬವನ್ನು ನಿರ್ವಹಿಸುತ್ತಿದ್ದೇನೆ. – ಮಂಜುಳಾ ಹಿರೇಮಠ, ಮಹಿಳಾ ಆಟೋ ಚಾಲಕಿ