Advertisement

ವಕೀಲಿ ವೃತ್ತಿ ಬಿಟ್ಟು ಕೃಷಿ ಕ್ಷೇತ್ರದಲ್ಲಿ ಸಾಧನೆ

04:01 PM Mar 08, 2021 | Team Udayavani |

ತುಮಕೂರು: ಕೃಷಿ ಮಾಡಿ ಪ್ರಗತಿ ಸಾಧಿಸಿದ್ದೇವೆ ಎಂದು ಹೇಳುವವರೇ ಕಡಿಮೆ, ವ್ಯವಸಾಯ ಮಾಡಿ ನಷ್ಟ ಅನುಭವಿಸಿ ಸಾಲ ಮಾಡಿ ಸಾಲತೀರಿಸಲಾಗದೇ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಮುಂದಾಗುವ ರೈತರಿಗೆ ಸ್ಪೂರ್ತಿ ದಾಯಕರಾಗಿ ರೈತ ಮಹಿಳೆ ಎ.ಸಿ. ರೂಪ ಕೃಷಿ ಯಿಂದ ಸಾಧನೆ ಮಾಡಬಹುದುಆರ್ಥಿಕವಾಗಿಯೂ ಪ್ರಗತಿ ಸಾಧಿಸಬಹುದು ಎನ್ನುವುದನ್ನು ಗುಬ್ಬಿ ತಾಲೂಕಿನಲ್ಲಿ ಬೆಂಗಳೂರಿನಿಂದ ಹಳ್ಳಿಗೆ ಬಂದಿರುವ ವಕೀಲೆಯೊಬ್ಬರು ಸಾಧಿಸಿ ತೋರಿಸಿದ್ದಾರೆ.

Advertisement

ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ನಾಗ ಸಂದ್ರ ಗ್ರಾಮದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಎ.ಸಿ.ರೂಪ ಕಾನೂನು ಪದವೀಧರೆ ಬೆಂಗಳೂರಿನಲ್ಲಿ ವಕೀಲೆ ವೃತ್ತಿ ಮಾಡುತ್ತಿದ್ದರು, ಇವರ ಪತಿ ಆರ್‌.ಕುಮಾರ ಸ್ವಾಮಿ ಮೆಕಾನಿಕಲ್‌ ಎಂಜಿನಿಯರ್‌ ಪ್ರತಿಷ್ಠಿತ ಕಂಪನಿಯಲ್ಲಿ ಕಲಸ ಮಾಡುತ್ತಿದ್ದರು.

ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡಿ ಕೊಂಡು ಇದ್ದರು, ಆದರೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಲುಷಿತ ವಾತಾ ವರಣ, ಯಾಂತ್ರಿಕ ಬದುಕಿಗೆ ಬೇಸತ್ತು ಹಳ್ಳಿಗೆ ಹೋಗಿ ಕೃಷಿ ಮಾಡುವ ನಿರ್ದಾರಕ್ಕೆ ಬಂದು ಕಳೆದ ಏಳು ವರ್ಷದ ಹಿಂದೆ ನಾಗಸಂದ್ರಕ್ಕೆಬಂದು ಕೃಷಿ ಕೆಲಸ ಆರಂಭಿಸಿ ಇಂದು ಜಿಲ್ಲೆಯಲ್ಲಿ ಪ್ರಗತಿ ಪರ ಯುವ ರೈತ ಮಹಿಳೆ ಯಾಗಿ ಹೊರ ಹೊಮ್ಮಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಸಾಗಸಂದ್ರ ಸ.ನಂ. 79 ರಲ್ಲಿ ಎ.ಸಿ ರೂಪ ಅವರು ತಮ್ಮ ತಂದೆಯಿಂದ 4 ಎಕರೆ ವಿಸ್ತೀರ್ಣದ ಜಮೀನಿನನ್ನು ಖರೀದಿಸಿದ್ದರು. ಸುಮಾರು ವರ್ಷಗಳಿಂದ ಅಕಾಲಿಕ ಮಳೆ ಮತ್ತು ಏಕ ಬೆಳೆ ಪದ್ಧತಿ ಅಳವಡಿಸಿಕೊಂಡು ಬಂದಿದ್ದ ರೂಪ ಅವರ ತಂದೆ ಕೃಷಿಯಲ್ಲಿ ಲಾಭ ಕಾಣದೇ ಹಾಗೆ ಬೀಳು ಬಿಟ್ಟಿದ್ದರು.

ಈ ಭೂಮಿಯನ್ನು ಖರೀದಿಸಿದ ಮೇಲೆ ಆರ್‌.ಕುಮಾರ ಸ್ವಾಮಿ ಮತ್ತು ರೂಪ ದಂಪತಿ  ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ ಅದರ ಫ‌ಲಿತಾಂಶದ ಮೇರೆಗೆ ಮೊದಲಿಗೆ ಹೊಲದಲ್ಲಿ ದೊರೆಯುವ ಕೃಷಿ ತ್ಯಾಜ್ಯ, ಹಸುವಿನ ಸಗಣಿ ಮತ್ತು ಹೊಲದ ಅಕ್ಕ ಪಕ್ಕ ಬೆಳೆದ ತಂಗಡಿ ಗಿಡ ಮತ್ತು ಕಳೆಗಳನ್ನು ತಿಪ್ಪೆಗೆ ಹಾಕಿ ಪ್ರಾರಂಭದಲ್ಲಿ ಉತ್ತಮ ಕೊಟ್ಟಿಗೆಗೊಬ್ಬರ ಪಡೆದು ಅದನ್ನು ಹೊಲಕ್ಕೆ ಹಾಕಿ ಸಾವಯವ ಅಂಶ ಹೆಚ್ಚಿಗೆ ಮಾಡಿ ಭೂಮಿಯ ಫ‌ಲವತ್ತತೆ ಮಾಡಿ ಮೊದಲನೇವರ್ಷದಲ್ಲಿದಿಂದಲೇ ಏಕ ಬೆಳೆ ಪದ್ಧತಿಗೆ ಹೋಗದೇ ನುಗ್ಗೆಯಲ್ಲಿ ಅಂತರ ಬೆಳೆಯಾಗಿಪಪ್ಪಾಯ ಮತ್ತು ಹೆಸರು ಹಾಕಿ ಉತ್ತಮ ಲಾಭ ಪಡೆದರು.

Advertisement

ತದನಂತರ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯ ಸಹಾಯಧನದಡಿಯಲ್ಲಿ ಬಿದ್ದ ಮಳೆಯ ನೀರನ್ನು ಹೊರಗೆ ಹರಿದು ಹೋಗಲು ಬಿಡದೆ ಹೊಲದಲ್ಲಿಯೇ ಇಂಗಿಸಿ ಫ‌ಲವತ್ತಾದ ಮೇಲ್ಮಣ್ಣು ಕೊಚ್ಚಿಹೋಗದಂತೆ ತಡೆಯಲು ಬದುಗಳ ನಿರ್ಮಾಣ ಮಾಡಿ ಹೆಚ್ಚಾದ ಮಳೆ ನೀರನ್ನು ಸಂಗ್ರಹಿಸಿ ಮಳೆ ಬರದೇ ಇದ್ದ ಸಂದಿಗ್ಧ ಸಮಯದಲ್ಲಿ ಬೆಳೆ ಗಳಿಗೆ ರಕ್ಷಣಾತ್ಮಕ ನೀರಾವರಿ ಮಾಡಲು ಕೃಷಿ ಹೊಂಡ ನಿರ್ಮಾಣ, ಆರ್ಥಿಕವಾಗಿ ಮಾರು ಕಟ್ಟೆಗೆ ಉತ್ತಮ ಗುಣಮಟ್ಟದ ಬೆಳೆ ಬೆಳೆದು ಹೆಚ್ಚಿನ ಲಾಭ ಗಳಿಸಲು ನೆರಳು ಪರದೆ ನಿರ್ಮಾಣ ಮಾಡಿ ಕೊಂಡು ಬ್ರಿಡ್‌ ದೊಣ್ಣೆ ಮೆಣಸಿನಕಾಯಿ, ಬೀನ್ಸ್‌ ಹಾಗೂ ಟೊಮೆಟೋ ಬೆಳೆಯಲು ಅನುಕೂಲಾಯಿತು ಹಾಗೇ ತೋಟಗಾರಿಕೆ ಇಲಾಖೆಯಿಂದ ಸಹಾಯಧನದಡಿ ಪಾಲಿಹೌಸ್‌ನಿರ್ಮಾಣ ಮಾಡಿ ಕೊಂಡು ಹೊರಗೆ ಬೆಳೆಯುವ ಹೈ ಬ್ರಿಡ್‌ ದೊಣ್ಣೆ ಮೆಣಸಿನಕಾಯಿ, ಮೆರಿ ಗೋ ಲ್ಡ್‌ ಸೇವಂತಿಗೆ, ಬೀನ್ಸ್‌, ಎಲೆ ಕೋಸು ಬೆಳೆ ಇಳುವರಿ ಗಿಂತ 3 ರಿಂದ 4 ಪಟು r ಇಳು ವರಿ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ರೂಪ.

ಅದೇ ರೀತಿ ಹೊಲದಲ್ಲಿಯೇ ಮನೆ ಕಟ್ಟಿ ನನ್ನ ಕುಟುಂಬದೊಂದಿಗೆ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡು ಸಾಂಪ್ರದಾಯಿಕ ಬೆಳೆ ಪದ್ಧತಿಯಿಂದ ಸಮಗ್ರ ಕೃಷಿಯಡೆಗೆ ಬಂದು ಇಂದು ಬಾಳೆ, ಪುಷ್ಪ ಕೃ‌ಷಿ, ಕೃ‌ಷಿ ಅರಣ್ಯ, ಹೈನುಗಾರಿಕೆ, ಸಂಪದ್ಬರಿತ ಕಾಂಪೋಸ್ಟ ತಯಾರಿಕೆ, ಕೊಟ್ಟಿಗೆ ಗೊಬ್ಬರದ ಬಳಕೆ, ಎರೆಗೊಬ್ಬರ ಬಳಕೆ ಮಾಡುವ ಜೊತೆಗೆ ವೈಜ್ಞಾನಿಕವಾಗಿ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ ಶಿಫಾರಿತ ಪ್ರಮಾಣದಲ್ಲಿ ರಸಗೊಬ್ಬ ರ ಬಳಕೆ‌, ಬೆಳೆಯ ಅನುಸಾರವಾಗಿ ಅಗತ್ಯ ಬಿದ್ದ‌ಲ್ಲಿ ಪೀಡೆ ನಾಶಕಗಳ ಸುರಕ್ಷಿತ ಬಳಕೆ ಮಾಡಿದ್ದಾರೆ.

ತರಕಾರಿ ಬೆಳೆದು ಲಾಭ ಕಂಡರು :

ರೂಪ ಮತ್ತು ಕುಮಾರ ಸ್ವಾಮಿ ದಂಪತಿಗಳು ಕೃಷಿ ಕುಟುಂಬದಿಂದ ಬಂದಿದ್ದರಿಂದಕೃಷಿ ಯಲ್ಲಿ ವಿವಿಧ ರೀತಿಯ ಬೆಳೆ ಬೆಳೆದು ಅರ್ಧ ಎಕರೆ ನೆರಳು ಪರದೆ ಹಾಗೂ ¼ ಎಕರೆ ಪಾಲಿಹೌಸ್‌ ಮನೆಯಲ್ಲಿ ಹೈಬ್ರಿಡ್‌ ದೊಣ್ಣೆ ಮೆಣಸಿನಕಾಯಿ, ಬೀನ್ಸ್‌ ಟೊಮೆಟೋ, ಎಲೆ ಕೋಸು ಮತ್ತು ಹೂಕೋಸು ಬೆಳೆಯನ್ನು ಬೆಳೆದು ಒಂದು ಹಂತದ ವರೆಗೆ ಸಾವಯವ ಪದ್ಧತಿ (ಜೀವಾಮೃತ, ಜೀವಸಾರ ಘಟಕ, ಎರೆಹುಳು ಗೊಬ್ಬರ ಟ್ರೆ ಕೋಡರ್ಮಾ, ಸುಡೋಮೋನಾಸ್‌, ಅಜಟೋಬ್ಯಾಕ್ಟರ್‌, ಪಿ.ಎಸ್‌.ಬಿ, ಬೇವಿನ ಇಂಡಿ ಹಾಗೂ ಬೇವಿನ ಎಣ್ಣೆ, ಹಳದಿ ಅಂಟಿನ ಟ್ರ್ಯಾಪ್ಸ್‌, ಚೆಂಡು ಹೂ ಅಂಚು ಬೆಳೆ) ನಂತರದಲ್ಲಿ ಹನಿ ನೀರಾವರಿಯಲ್ಲಿ ರಸಾವರಿ ಬಳಸಿ ಬೆಳೆಯುತ್ತಿದ್ದಾರೆ.

ರೈತರು ಕೃಷಿ ಒಂದನ್ನೇ ನಂಬಿದರೆ ಕಷ್ಟವಾಗುತ್ತದೆ. ಕೃಷಿ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಸೇರಿ ದಂತೆ ಬೇರೆ ಉಪ ಕಸಬು ಮಾಡಬೇಕು. ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯ ಬೇಕು ಎನ್ನುವುದನ್ನು ನೋಡಿ ಕೊಂಡು ಬೆಳೆಯ ಬೇಕು. ನನಗೆ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ. ಎ.ಸಿ.ರೂಪಾ, ಪ್ರಗತಿ ಪರ ಮಹಿಳೆ.

 

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next