Advertisement

ಮಹಿಳಾ ದಿನಾಚರಣೆ: ಸಾಧಕಿಯರಿಗೆ ಸಮ್ಮಾನ

03:36 PM Mar 09, 2017 | Team Udayavani |

ಉಡುಪಿ: ಜಿಲ್ಲಾಡಳಿತ, ಜಿ. ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಹಾಗೂ ಪರ್ಕಳ ಲಯನ್ಸ್‌  ಕ್ಲಬ್‌ ಸಂಯುಕ್ತಾಶ್ರಯದಲ್ಲಿ  ನಡೆದ ಪುರಭವನದಲ್ಲಿ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಮ್ಮಾನಿಸಿದರು. 

Advertisement

ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್‌, ಕುಂದಾಪುರ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾ ದಾಸ್‌, ಶಿಶು ಅಭಿವೃದ್ಧಿ ಉಡುಪಿಯ ಮೇಲ್ವಿಚಾರಕಿ ಮೀರಾ ಕುಮಾರಿ, ಶಿಶು ಅಭಿವೃದ್ಧಿ ಬ್ರಹ್ಮಾವರದ ಮೇಲ್ವಿಚಾರಕಿ ವನಿತಾ ಹೆಗ್ಡೆ, ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫೆರ್ನಾಂಡಿಸ್‌, ಪ್ರೇಮಲತಾ, ಅಜೆಕಾರು ಗ್ರಾ. ಪಂ. ಪಿಡಿಒ ಝೀನತ್‌ ಉನ್ನಿಸಾ, “ಮೊದಲ ತೊದಲು’ ಕವನ ಸಂಕಲನ ರಚಿಸಿದ ನಿಟ್ಟೂರು ಬಾಲಮಂದಿರದ ವಿದ್ಯಾರ್ಥಿನಿ ಆರತಿ ಮಡಿವಾಳ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಪ್ರೇರಣಾ ಪರಿಕಲ್ಪನೆಯ ಸಂಚಿಕೆ ಹಾಗೂ ಗರ್ಭಿಣಿ ಮಹಿಳೆಯರ ಅಪೌಷ್ಟಿಕತೆ ನಿವಾರಣೆ ಕುರಿತ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ – ಸ್ವತ್ಛಶಕ್ತಿ ಸಪ್ತಾಹದಂಗವಾಗಿ ಸರಕಾರಿ ಪ. ಪೂ. ಕಾಲೇಜಿನ ಬಳಿಯಿಂದ ಪುರಭವನದವರೆಗೆ ಜಾಥಾ ನಡೆಯಿತು. ರಕ್ತದೊತ್ತಡ, ಮಧುಮೇಹ, ನೇತ್ರ ತಪಾಸಣೆ ನಡೆಸಲಾಯಿತು. ಸ್ತ್ರೀ ಶಕ್ತಿ ಹಾಗೂ ಮಹಿಳಾ ಉದ್ದಿಮೆದಾರರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next