Advertisement
ನೈರುತ್ಯ ರೈಲ್ವೆ ಇಲಾಖೆಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ರಾಜ -ರಾಣಿ ಎಕ್ಸ್‌ಪ್ರಸ್ ರೈಲಿನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯೇ ರೈಲನ್ನು ಚಲಾಯಿಸಿದರು. ಕೆ.ಆರ್.ಪುರ ಸಂಚಾರಿ ಪೊಲೀಸರು ವಾಕಥಾನ್ ನಡೆಸಿದರು.
Related Articles
Advertisement
ಆದರೆ, ಬಹುತೇಕ ಸಾಮಾನ್ಯ ಕಾರ್ಮಿಕ ಮಹಿಳೆಯರು, ಗೃಹಿಣಿಯರು ಮಹಿಳಾ ದಿನದ ಪರಿವೇ ಇಲ್ಲದೆ ಎಂದಿನಂತೆ ನಿತ್ಯ ಕಾಯಕದಲ್ಲಿ ಮಗ್ನರಾಗಿದ್ದರು. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾಗೃತಿ ಜಾಥಾ, ವಾಕಥಾನ್, ಜುಂಬಾ ನೃತ್ಯ, ಕಾನೂನು ಬಗ್ಗೆ ಅರಿವು ಮೂಡಿಸುವ ಸುರಕ್ಷಾ ಚಕ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾವಿತ್ರಿಬಾಪುಲೆ ಅವರ ವಿಚಾರಧಾರೆ ತಿಳಿಸಿ: ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿಯಿಂದ ನಗರದ ಯುವಿಸಿಇ ಅಲುಮ್ನಿ ಸಭಾಂಗಣದಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು.
ಸಂಘಟನೆಯ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಮಾತನಾಡಿ, ಇಂದಿಗೂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಪುರುಷ ಪ್ರಧಾನ ಧೋರಣೆಗಳು, ಅಪ್ರಜಾತಾಂತ್ರಿಕ ಮನೋಭಾವಗಳಿಂದ ಮಹಿಳಾ ಸಮುದಾಯ ತತ್ತರಿಸುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಪುಲೆ ಮುಂತಾದ ಮಹನೀಯರ ವಿಚಾರಗಳನ್ನು ಹರಡಬೇಕಿದೆ ಎಂದರು.