ವನಿತೆಯರಿಗೆ ಎದುರಾಗಿರುವ ದೊಡ್ಡ ಸವಾಲೆಂದರೆ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್.
ಇದು ಫೆ. 12ರಂದು ಮೊದಲ್ಗೊಂಡು ಫೆ. 26ಕ್ಕೆ ಮುಗಿಯುತ್ತದೆ. ಇದಕ್ಕೂ ಮೊದಲು ವನಿತೆಯರು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಸೆಣಸಲಿದ್ದಾರೆ. ಅನಂತರ ಚೊಚ್ಚಲ ವನಿತಾ ಐಪಿಎಲ್ ಪಂದ್ಯಾವಳಿ ಏರ್ಪಡಲಿದೆ.
3 ತಿಂಗಳ ವಿಶ್ರಾಂತಿ ಬಳಿಕ ಜೂನ್-ಜುಲೈಯಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕೆ ತೆರಳಲಿದೆ. ಅಲ್ಲಿ 3 ಏಕದಿನ, 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ಮತ್ತೊಂದು ಬ್ರೇಕ್ ಪಡೆದು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನು ಆಡುತ್ತದೆ. ಅಕ್ಟೋಬರ್‌ನಲ್ಲಿ ನ್ಯೂಜಿಲ್ಯಾಂಡ್ ತಂಡದ ಆಗಮನವಾಗಲಿದೆ. ಆಗಲೂ 3 ಏಕದಿನ, 3 ಟಿ20 ಮುಖಾಮುಖಿ ಏರ್ಪಡಲಿದೆ.
ಭಾರತದ ವನಿತೆಯರು ವರ್ಷದ ಏಕೈಕ ಟೆಸ್ಟ್ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧ 2023ರ ಕೊನೆಯಲ್ಲಿ ಆಡಲಿದ್ದಾರೆ. ಈ ಸರಣಿಯಲ್ಲಿ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿವೆ.