Advertisement

ಮಿಥಾಲಿ, ದೀಪ್ತಿ, ವೇದಾ ನಾಯಕತ್ವ

10:55 AM Aug 03, 2018 | |

ಹೊಸದಿಲ್ಲಿ: ಬೆಂಗಳೂರಿನಲ್ಲಿ ಆ. 14ರಿಂದ 21ರ ತನಕ ನಡೆಯಲಿರುವ ವನಿತೆಯರ ಟಿ20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಸರಣಿಗಾಗಿ 3 ತಂಡಗಳನ್ನು ಆರಿಸಲಾಗಿದೆ. ಇಂಡಿಯಾ ಬ್ಲೂ, ಇಂಡಿಯಾ ರೆಡ್‌ ಹಾಗೂ ಇಂಡಿಯಾ ಗ್ರೀನ್‌ ಹೆಸರಿನ ಈ ತಂಡಗಳನ್ನು ಕ್ರಮವಾಗಿ ಮಿಥಾಲಿ ರಾಜ್‌, ದೀಪ್ತಿ ಶರ್ಮ ಹಾಗೂ ವೇದಾ ಕೃಷ್ಣಮೂರ್ತಿ ಮುನ್ನಡೆಸಲಿ
ದ್ದಾರೆ. ಒಟ್ಟು 39 ಆಟಗಾರ್ತಿಯರು ಈ 3 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಮಂಧನಾ, ಕೌರ್‌ ಮಿಸ್‌
ಈ ಪಂದ್ಯಾವಳಿಯಿಂದ ಹೊರಗುಳಿಯುವ ಇಬ್ಬರು ಪ್ರಮುಖ ಆಟಗಾರ್ತಿಯ ರೆಂದರೆ ಸ್ಮತಿ ಮಂಧನಾ ಮತ್ತು ಹರ್ಮನ್‌ಪ್ರೀತ್‌ ಕೌರ್‌. ಇವರಿಬ್ಬರು ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ “ಕಿಯಾ ಸೂಪರ್‌ ಲೀಗ್‌’ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ವರ್ಷಾಂತ್ಯ ವೆಸ್ಟ್‌ ಇಂಡೀಸ್‌ನಲ್ಲಿ ನಡೆ ಯಲಿರುವ ಐಸಿಸಿ ವನಿತಾ ವರ್ಲ್ಡ್ ಟಿ20 ಪಂದ್ಯಾವಳಿಯ ಹಿನ್ನೆಲೆಯಲ್ಲಿ ಚಾಲೆಂಜರ್‌ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವ ದ್ದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next