Advertisement

ವನಿತಾ ಬಿಗ್‌ ಬಾಶ್‌ ಮಂಧನಾ ಮಿಂಚಿದರೂ ಹೋಬರ್ಟ್‌ ಗೆಲ್ಲಲಿಲ್ಲ

06:00 AM Dec 25, 2018 | |

ಸಿಡ್ನಿ: ಭಾರತದ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ “ವನಿತಾ ಬಿಗ್‌ ಬಾಶ್‌ ಲೀಗ್‌’ನಲ್ಲಿ ಮತ್ತೂಂದು ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೆ ಇವರ ಸಾಹಸದ ಹೊರತಾಗಿಯೂ ಹೋಬರ್ಟ್‌ ಹರಿಕೇನ್ಸ್‌ ಗೆಲುವು ಸಾಧಿಸುವಲ್ಲಿ ವಿಫ‌ಲವಾಗಿದೆ.

Advertisement

ಸೋಮವಾರ ಸಿಡ್ನಿಯಲ್ಲಿ ನಡೆದ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಮಂಧನಾ 22 ಎಸೆತಗಳಿಂದ 35 ರನ್‌ ಸಿಡಿಸಿದರು (5 ಬೌಂಡರಿ, 1 ಸಿಕ್ಸರ್‌). ಆದರೆ ಉಳಿದ ಆಟಗಾರ್ತಿಯರು ವಿಫ‌ಲರಾದ್ದರಿಂದ ಹೋಬರ್ಟ್‌ ಹರಿಕೇನ್ಸ್‌ 135 ರನ್ನುಗಳಿಗೆ ಕುಸಿಯಿತು. ಜವಾಬಿತ್ತ ಸಿಡ್ನಿ ಥಂಡರ್ 6 ವಿಕೆಟ್‌ಗಳಿಂದ ಗೆದ್ದು ಬಂದಿತು. ರಶೆಲ್‌ ಹೇನ್ಸ್‌ 48 ಎಸೆತಗಳಿಂದ 68 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next