Advertisement

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

10:47 PM Nov 17, 2024 | Team Udayavani |

ರಾಜ್‌ಗಿರ್‌ (ಬಿಹಾರ): ಹಾಲಿ ಚಾಂಪಿಯನ್‌ ಭಾರತ ಅಜೇಯವಾಗಿ “ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ’ ಪಂದ್ಯಾವಳಿಯ ಲೀಗ್‌ ಅಭಿಯಾನವನ್ನು ಮುಗಿಸಿದೆ. ರವಿವಾರದ ಕೊನೆಯ ಪಂದ್ಯದಲ್ಲಿ ಸಲೀಮಾ ಟೇಟೆ ಪಡೆ ಜಪಾನ್‌ಗೆ 3-0 ಅಂತರದ ಆಘಾತವಿಕ್ಕಿತು.

Advertisement

ಉಪನಾಯಕಿ ನವನೀತ್‌ ಕೌರ್‌ 37ನೇ ನಿಮಿಷದಲ್ಲಿ, ದೀಪಿಕಾ 47ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈ ಸಾಧನೆಯೊಂದಿಗೆ ದೀಪಿಕಾ ಪಂದ್ಯಾವಳಿಯಲ್ಲೇ ಅತೀ ಹೆಚ್ಚು 10 ಗೋಲು ಹೊಡೆದ ಸಾಧನೆಗೈದರು. ಇದರಲ್ಲಿ 5 ಪೆನಾಲ್ಟಿ ಕಾರ್ನರ್‌, 4 ಫೀಲ್ಡ್‌ ಗೋಲ್‌ ಮತ್ತು ಒಂದು ಪೆನಾಲ್ಟಿ ಸ್ಟ್ರೋಕ್‌ ಆಗಿತ್ತು.

ಐದೂ ಪಂದ್ಯಗಳನ್ನು ಗೆದ್ದ ಭಾರತ ಗರಿಷ್ಠ 15 ಅಂಕಗಳೊಂದಿಗೆ ಲೀಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿತು. ಒಲಿಂಪಿಕ್ಸ್‌
ನಲ್ಲಿ ಬೆಳ್ಳಿ ಪದಕ ಗೆದ್ದ ಚೀನ ದ್ವಿತೀಯ ಸ್ಥಾನಿಯಾಗಿದೆ (12 ಅಂಕ). ಶನಿವಾರ ಚೀನವನ್ನು ಮಣಿಸಿದಾಗಲೇ ಭಾರತದ ಸೆಮಿಫೈನಲ್‌ ಖಾತ್ರಿಯಾಗಿತ್ತು. ಮಲೇಷ್ಯಾ 3ನೇ ಹಾಗೂ ಜಪಾನ್‌ 4ನೇ ಸ್ಥಾನದೊಂದಿಗೆ ಲೀಗ್‌ ಸ್ಪರ್ಧೆಗಳನ್ನು ಮುಗಿಸಿದವು.

ಭಾರತ-ಜಪಾನ್‌ ಸೆಮಿಫೈನಲ್‌
ಮಂಗಳವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಭಾರತ 4ನೇ ಸ್ಥಾನಿ ಯಾದ ಜಪಾನ್‌ ವಿರುದ್ಧ ಸೆಣಸ ಲಿದೆ. ಇನ್ನೊಂದು ಸೆಮಿಫೈನಲ್‌ ಚೀನ – ಮಲೇಷ್ಯಾ ನಡುವೆ ಸಾಗಲಿದೆ. ಥಾಯ್ಲೆಂಡ್‌, ದ. ಕೊರಿಯಾ ಹೊರಬಿದ್ದವು.

ಇತರ ಪಂದ್ಯಗಳಲ್ಲಿ ಮಲೇಷ್ಯಾ ಮತ್ತು ಚೀನ ಕ್ರಮವಾಗಿ ಥಾಯ್ಲೆಂಡ್‌ ಮತ್ತು ದಕ್ಷಿಣ ಕೊರಿಯಾ ವಿರುದ್ಧ 2-0 ಅಂತರದ ಜಯ ಸಾಧಿಸಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next