ಕೌಲಾಲಂಪುರ್: ಇಲ್ಲಿ ಶನಿವಾರ ನಡೆದ ಮಹಿಳಾ ಏಷ್ಯಾಕಪ್ ಟಿ-20 ಪಂದ್ಯವಾಳಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಪಾಕ್ ತಂಡ ಗೆಲ್ಲಲು ನೀಡಿದ 73 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ 16.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 73 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.
ಪಾಕ್ ನಿಗದಿತ 20 ಓವರ್‌ಗಲ್ಲಿ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 7 ವಿಕೆಟ್‌ಗಳನ್ನು ಕಳೆದುಕೊಂಡು 73 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
73 ರನ್ ಬೆನ್ನಟ್ಟಿದ ವೇಳೆ ಆರಂಭಿಕ ಆಘಾತಕ್ಕೆ ಸಿಲುಕಿದ ಭಾರತ 1 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು, 5 ರನ್ ಆಗುವಷ್ಟರಲ್ಲಿ 2 ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ಕ್ರೀಸ್‌ಗೆ ಬಂದ ಸ್ಮೃತಿ ಮಂದಾನ 38 ಮತ್ತು ನಾಯಕಿ ಹರ್ಮ್ಪ್ರೀತ್ ಕೌರ್ 34 ರನ್‌ಗಳ ಕೊಡುಗೆ ಸಲ್ಲಿಸಿ ತಂಡಕ್ಕೆ ಜಯ ತಂದಿಟ್ಟರು.
ಬಾಂಗ್ಲಾದೇಶ ಮತ್ತು ಆತಿಥೇಯ ಮಲೇಷ್ಯಾ ತಂಡದ ನಡುವೆ ಇನ್ನೊಂದು ಸೆಮಿ ಫೈನಲ್ ಪಂದ್ಯ ನಡೆಯಲಿದ್ದು ವಿಜೇತರನ್ನು ಭಾರತ ಎದುರಿಸಲಿದೆ.