Advertisement

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಹರ್ಮನ್‌ಪ್ರೀತ್‌ ಕೌರ್‌ ನಾಯಕಿ

03:18 PM Sep 22, 2022 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಅ. ಒಂದರಿಂದ 15ರ ತನಕ ನಡೆಯಲಿರುವ ಏಷ್ಯಾ ಕಪ್‌ ಟಿ20 ಪಂದ್ಯಾವಳಿಗಾಗಿ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ.

Advertisement

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಈ ತಂಡದಲ್ಲಿ ಗಮನಾರ್ಹ ಬದಲಾವಣೆಯೇನೂ ಕಂಡುಬಂದಿಲ್ಲ. ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗಾಗಿ ಆಯ್ದ ಬಳಗವನ್ನೇ ಉಳಿಸಿಕೊಳ್ಳಲಾಗಿದೆ.

ತನಿಯಾ ಭಾಟಿಯಾ ಮತ್ತು ಸಿಮ್ರಾನ್‌ ದಿಲ್‌ ಬಹಾದೂರ್‌ ಮೀಸಲು ಆಟಗಾರ್ತಿಯರ ಯಾದಿಯಲ್ಲಿದ್ದಾರೆ.

ಇದು 7 ತಂಡಗಳ ನಡುವಿನ ರೌಂಡ್‌ ರಾಬಿನ್‌ ಲೀಗ್‌ ಮುಖಾಮುಖಿ. 6 ಬಾರಿಯ ಚಾಂಪಿಯನ್‌ ಭಾರತ ತನ್ನ ಮೊದಲ ಪಂದ್ಯವನ್ನು ಅ. ಒಂದರಂದು ಶ್ರೀಲಂಕಾ ವಿರುದ್ಧ ಆಡಲಿದೆ.

 

ಭಾರತ ತಂಡ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ (ಉಪ ನಾಯಕಿ), ದೀಪ್ತಿ ಶರ್ಮ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಎಸ್‌. ಮೇಘನಾ, ರಿಚಾ ಘೋಷ್‌ (ವಿ.ಕೀ.), ಸ್ನೇಹ್‌ ರಾಣಾ, ಡಿ. ಹೇಮಲತಾ, ಮೇಘನಾ ಸಿಂಗ್‌, ರೇಣುಕಾ ಠಾಕೂರ್‌, ಪೂಜಾ ವಸ್ತ್ರಾಕರ್‌, ರಾಜೇ ಶ್ವರಿ ಗಾಯಕ್ವಾಡ್‌, ರಾಧಾ ಯಾದವ್‌, ಕಿರಣ್‌ ಪ್ರಭು .

ಮೀಸಲು ಆಟಗಾರ್ತಿಯರು: ತನಿಯಾ ಭಾಟಿಯಾ, ಸಿಮ್ರಾನ್‌ ದಿಲ್‌ ಬಹಾದೂರ್‌.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next