Advertisement

ಮಹಿಳೆಯರು, ಯುವಜನಾಂಗದ ಸಶಕ್ತಿಗೆ ಯೋಜನೆ: ಸುರೇಶ್‌ ಪ್ರಭು

11:43 AM Jan 22, 2018 | Team Udayavani |

ಮಂಗಳೂರು: ಮಹಿಳೆಯರು ಮತ್ತು ಯುವ ಜನಾಂಗವನ್ನು ಸಶಕ್ತರನ್ನಾಗಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಕೇಂದ್ರ ಸಚಿವ ಸುರೇಶ್‌ ಪ್ರಭು ಹೇಳಿದರು.

Advertisement

ಗುರುಪುರ ಕೈಕಂಬದಲ್ಲಿ ರವಿವಾರ ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಕಚೇರಿ “ಮಾತೃಧಾಮ’ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಸೌಲಭ್ಯಗಳು ದೊರೆ ತಾಗ ಬದಲಾವಣೆ ವೇಗ ಪಡೆಯು ತ್ತದೆ. ಜನಧನ ಖಾತೆ ತೆರೆಯುವ ಅಭಿಯಾನ ದಲ್ಲಿ ಮಹಿಳೆಯರೇ ಮುಂಚೂಣಿ ಯಲ್ಲಿರುವುದು ವಿಶೇಷ. ಯುವ ಜನರ ಅಭಿವೃದ್ಧಿಗಾಗಿ ಮುದ್ರಾ ಸಾಲ ಯೋಜನೆ, ಸ್ಟಾರ್ಟ್‌ ಅಪ್‌ ಎಂಬ ವಿಶೇಷ ಪರಿಕಲ್ಪನೆಯನ್ನು ಕೇಂದ್ರ ಆರಂಭಿಸಿದೆ. ಕೇಂದ್ರ ಸರಕಾರ ಜನ ಸೇವೆಗೆ ಸದಾ ಬದ್ಧ ಎಂದರು. ದ.ಕ. ಜಿಲ್ಲೆಯ ಕ್ರಿಯಾ ಶೀಲ  ಸಮುದಾಯದ ಆಶಯಕ್ಕೆ ತಕ್ಕಂತೆ ಕೇಂದ್ರ ಸರಕಾರ ಸ್ಪಂದಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

15 ಶಾಖೆ ಗುರಿ: ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್‌ ಕುಮಾರ್‌ ಮಾತನಾಡಿ, ಕೇವಲ 12 ವರ್ಷಗಳಲ್ಲಿ 8 ಶಾಖೆಗಳನ್ನು ವಿಸ್ತರಿಸಿದ ಮಾತೃಭೂಮಿ ಸೌಹಾರ್ದ ಸಹಕಾರಿ ಮುಂದಿನ ದಿನಗಳಲ್ಲಿ ಒಟ್ಟು 15 ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ. 1,500 ಸ್ವಸಹಾಯ ಗುಂಪುಗಳನ್ನು ಆರಂಭಿಸಲಾಗುವುದು. ರಾಜ್ಯದ ವಿವಿಧೆಡೆ ಶಾಖೆಗಳನ್ನು ತೆರೆ ಯುವ ಆಶಯವೂ ಇದೆ ಎಂದರು. ಸ್ವಂತ ಕಟ್ಟಡ ನಿರ್ಮಿಸಲು ಜಾಗವನ್ನು ಈಗಾಗಲೇ ಖರೀದಿಸಲಾಗಿದೆ. ಅದರಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭಿಸಿ ಕರಾವಳಿಗ‌ರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಕ.ರಾ.ಸೌ.ಸಂ.ಸ. ನಿರ್ದೇಶಕ ಮಂಜುನಾಥ ಎಸ್‌.ಕೆ. ಉಡುಪಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ನಿರ್ದೇಶಕರಾದ ವೆಂಕಟೇಶ್‌ ನಾವಡ, ಪೂವಪ್ಪ ಕುಂದರ್‌, ಭಾಸ್ಕರ ವಿ. ಶೆಟ್ಟಿ, ಪದ್ಮನಾಭ ರಾವ್‌, ಶ್ರೀಧರ ರಾವ್‌, ಪಾವನಾ ಜೆ. ಶೆಟ್ಟಿ, ವಿದ್ಯಾ ವಿ. ಕಾಮತ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಉಪಸ್ಥಿತರಿದ್ದರು. ಭಾಸ್ಕರ ದೇವಸ್ಯ ಅವರು ಸ್ವಾಗತಿಸಿ ಕೃಷ್ಣ ಕೊಂಪದವು ವಂದಿಸಿದರು. ಪುರುಷೋತ್ತಮ ಭಂಡಾರಿ ಅವರು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next