Advertisement

ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಪ್ರಬಲರು

10:11 PM Mar 23, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

Advertisement

ಈ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಚ್ಚು ಹೆಸರು ಹೊಂದಿರುವವರು ಮಹಿಳೆಯರೇ ಆಗಿದ್ದಾರೆ. ಮಂಜೇಶ್ವರ, ಕಾಸರಗೋಡು, ಉದುಮ, ಕಾಂಞಂಗಾಡ್‌, ತ್ರಿಕರಿಪುರ, ಕಣ್ಣೂರು ಜಿಲ್ಲೆಯ ಪಯ್ಯನ್ನೂರು, ಕಲಶೆÏàರಿ ವಿಧಾನಸಭೆ ಕ್ಷೇತ್ರಗಳು ಸೇರಿ ಕಾಸರಗೋಡು ಲೋಕಸಭೆ ಕ್ಷೇತ್ರವಾಗಿದೆ. ಇಲ್ಲಿ ಒಟ್ಟು 13,24,387 ಮಂದಿ ಮತದಾರರಿದ್ದು, ಇವರಲ್ಲಿ 6,87,696 ಮಂದಿ ಮಹಿಳೆಯರು, 6,36,689 ಮಂದಿ ಪುರುಷರಾಗಿದ್ದಾರೆ.

ಅತ್ಯ ಧಿಕ ಮತದಾರರಿರುವ ವಿಧಾನಸಭೆ ಕ್ಷೇತ್ರ ಮಂಜೇಶ್ವರವಾಗಿದೆ. ಇಲ್ಲಿ 2,08,616 ಮಂದಿ ಮತದಾರರಿದ್ದಾರೆ. ಇವರಲ್ಲಿ 1,03,786 ಮಂದಿ ಮಹಿಳೆಯರು, 1,04,830 ಮಂದಿ ಪುರುಷರೂ ಇದ್ದಾರೆ. ಮಹಿಳೆಯರು ಅತ್ಯ ಧಿಕ ಪ್ರಮಾಣದಲ್ಲಿ ಮತದಾರರಾಗಿರುವ ಕ್ಷೇತ್ರ ಕಾಂಞಂಗಾಡ್‌ ವಿಧಾನಸಭೆ ಕ್ಷೇತ್ರವಾಗಿದೆ. ಇಲ್ಲಿ 1,06,020 ಮಹಿಳೆಯರು ಮತದಾರರಾಗಿದ್ದಾರೆ. 
96852 ಪುರುಷ ಮತದಾರರು ಇದ್ದಾರೆ. ಒಟ್ಟು 2,02,874 ಮಂದಿ ಮತದಾರರು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ.

ಅತಿ ಕಡಿಮೆ ಮಹಿಳೆಯರು ಮತದಾರ ರಾಗಿರುವ ಕ್ಷೇತ್ರ ಪಯ್ಯನ್ನೂರು ವಿಧಾನಸಭೆ ಕ್ಷೇತ್ರವಾಗಿದೆ. 90,181 ಮಂದಿ ಮಹಿಳೆಯರು ಇಲ್ಲಿ ಮತದಾರ ಪಟ್ಟಿಯಲ್ಲಿದ್ದಾರೆ. 79,626 ಪುರುಷರು ಇಲ್ಲಿ ಮತದಾರರಾಗಿದ್ದಾರೆ. ಒಟ್ಟು 1,69,807 ಮಂದಿ ಮತದಾರರು ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾರೆ.

ಉಳಿದಂತೆ ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 1,88,494 ಮಂದಿ ಮತದಾರರಿದ್ದು, ಇವರಲ್ಲಿ 94,071 ಮಹಿಳೆಯರು, 94,423 ಮಂದಿ ಪುರುಷರು ಮತದಾರರಾಗಿದ್ದಾರೆ. ಉದುಮದಲ್ಲಿ ಒಟ್ಟು 1,97,894 ಮತದಾರರಿದ್ದು, 1,00,883 ಮಂದಿ ಮಹಿಳೆಯರು, 97,011 ಪುರುಷರೂ ಇದ್ದಾರೆ. ಕಾಂಞಂಗಾಡಿನಲ್ಲಿ ಒಟ್ಟು 2,02,874 ಮತದಾರರಿದ್ದು, 1,06,020 ಮಹಿಳೆಯರು, 96,852 ಪುರುಷರು, ಒಬ್ಬ ಟ್ರಾನ್ಸ್‌ಜೆಂಡರ್‌ ಮತದಾರರಿದ್ದಾರೆ. 

Advertisement

ತ್ರಿಕರಿಪುರದಲ್ಲಿ ಒಟ್ಟು 1,88,294 ಮತದಾರರಿದ್ದು, ಇವರಲ್ಲಿ 99,443 ಮಹಿಳೆಯರು 88,851 ಪುರುಷರು ಇದ್ದಾರೆ. ಕಲ್ಯಾಶೆÏàರಿಯಲ್ಲಿ ಒಟ್ಟು 1,68,408 ಮಂದಿ ಮತದಾರರಿದ್ದಾರೆ. ಇವರಲ್ಲಿ 93,312 ಮಂದಿ ಮಹಿಳೆಯರು, 75,096 ಮಹಿಳೆಯರೂ ಮತದಾರರಾಗಿದ್ದಾರೆ.

ಇದಲ್ಲದೆ 141 ಮಹಿಳಾ ಮತದಾರರು ಅನಿವಾಸಿ ಭಾರತೀಯ ಮತದಾರರ ಸಾಲಿನಲ್ಲಿ ದ್ದಾರೆ. ಒಟ್ಟು 3,923 ಮಂದಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿದ್ದಾರೆ. 51 ಮಂದಿ ಮಹಿಳೆಯರು ಸರ್ವೀಸ್‌ ಮತದಾರರ ಪಟ್ಟಿಯಲ್ಲಿದ್ದಾರೆ. ಒಟ್ಟು 2902 ಸರ್ವಿಸ್‌ ಮತದಾತರು ಈ ಬಾರಿ ಇದ್ದಾರೆ.

ಮಾ. 25ರ ವರೆಗೆ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ. 683 ಕೇಂದ್ರಗಳಲ್ಲಿ 1,317 ಮತಗಟ್ಟೆಗಳು ಈ ಬಾರಿಯ ಚುನಾವಣೆಗಾಗಿ ಜಿಲ್ಲೆಯಲ್ಲಿ ಬಳಕೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next