Advertisement
ಮಂಗಳೂರು-ಕಾಸರಗೋಡು ನಡುವಣ ಈಗಾಗಲೇ 34 ಬಸ್ಗಳು 228 ಟ್ರಿಪ್ಗ್ಳಲ್ಲಿ ಕಾರ್ಯಾಚರಿಸುತ್ತಿದೆ. ಈ ಎರಡೂ ರೂಟ್ಗಳ ನಡುವಣ ಸುಮಾರು 40ಕ್ಕೂ ಅಧಿಕ ಸ್ಟಾಪ್ಗಳಿದ್ದು, ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಕೆಲಸಕ್ಕೆಂದು ಬರುವವರಿಗೆ ಸಮಸ್ಯೆ ಉಂಟಾಗುತ್ತಿದ್ದು, ಸೂಪರ್ ಫಾಸ್ಟ್ ಬಸ್ಗೆ ಕಾಸರಗೋಡಿನ ವಿಕಾಸ ಟ್ರಸ್ಟ್ನಿಂದ ರವಿನಾರಾಯಣ ಗುಣಾಜೆ ಅವರು ಬೆಂಗಳೂರಿನ ಕೇಂದ್ರ ಕಚೇರಿಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಕಚೇರಿಯಿಂದ ಮಂಗಳೂರು ವಿಭಾಗಕ್ಕೆ ಪತ್ರ ಬರೆಯಲಾಗಿದ್ದು, ಬಸ್ ಒದಗಿಸಿದರೆ ಕಾರ್ಯಾಚರಣೆ ಮಾಡಲು ನಿರ್ಧಾರ ಮಾಡಲಾಗುತ್ತದೆ ಎಂದು ಉತ್ತರ ಬರೆಯಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಮಂಗ ಳೂರಿನಿಂದ ‘ಪಾಯಿಂಟ್ ಟು ಪಾಯಿಂಟ್’ ಮಾರ್ಗವಾಗಿ ಕಾರ್ಯಾಚ ರಿಸುತ್ತಿರುವ ಅಶ್ವಮೇಧ ಬಸ್ ಅನ್ನು ಮಂಗ ಳೂರು-ಕಾಸರಗೋಡು ಮಾರ್ಗವಾಗಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳೂರಿನಿಂದ ಸದ್ಯ 39 ಅಶ್ವಮೇಧ ಬಸ್ಗಳಿದ್ದು, ಮಂಗಳೂರು-ಮೈಸೂರು, ಮಂಗಳೂರು-ಹಾಸನ-ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಕಡೆಗೆ ಸಂಚರಿಸುತ್ತಿದೆ. ಇದೇ ರೀತಿ ‘ಪಾಯಿಂಟ್ ಟು ಪಾಯಿಂಟ್’ ಮಾರ್ಗವಾಗಿಯೇ ಮಂಗಳೂರು-ಕಾಸರಗೋಡು ಮಾರ್ಗವಾಗಿ ಅಶ್ವಮೇಧ ಬಸ್ ಕಾರ್ಯಾಚರಿಸುವ ಸಾಧ್ಯತೆ ಇದೆ.
Related Articles
ಮಂಗಳೂರು-ಕಾಸರಗೋಡು ಮಧ್ಯೆ ಕೆಎಸ್ಸಾರ್ಟಿಸಿ ಆರಂಭಿಸಿದ್ದ ವೋಲ್ವೋ ಬಸ್ ಸಂಚಾರ ಐದು ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಎರಡು ರೂಟ್ ನಡುವಣ ಪ್ರಯಾಣಿಕರನ್ನು ಸೆಳೆಯಲು 2019ರಲ್ಲಿ ಕೆಎಸ್ಸಾರ್ಟಿಸಿ ಹವಾನಿಯಂತ್ರಿತ ಬಸ್ ಸೇವೆ ಆರಂಭಿಸಲಾಗಿತ್ತು. ಮಂಗಳೂ ರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗ ದಿಂದ ಪ್ರತೀ ದಿನ 14 ಟ್ರಿಪ್ ಎ.ಸಿ. ವೋಲ್ವೋ ಬಸ್ ಸಂಚರಿಸುತ್ತಿತ್ತು. ಆದರೆ, ಪ್ರಯಾಣಿಕರ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತಗೊಂಡಿತ್ತು.
Advertisement
ಮಂಗಳೂರು- ಕಾಸರಗೋಡು ನಡುವಣ ಸೂಪರ್ ಫಾಸ್ಟ್ ಬಸ್ ಕಾರ್ಯಾಚರಣೆಗೆ ಆಗ್ರಹ ಕೇಳಿ ಬಂದಿದೆ. ಬಸ್ ಕಾರ್ಯಾಚರಣೆಗೆ ಕಾರ್ಯಸಾಧ್ಯತೆ ಬಗ್ಗೆ ಪ್ರಧಾನ ಕಚೇರಿಯಿಂದ ಮಾಹಿತಿ ಕೇಳಿದ್ದು, ಸುಮಾರು 10 ಬಸ್ ನೀಡುವಂತೆ ಮನವಿ ಮಾಡಿದ್ದೇವೆ. ಅದರಂತೆ ಬಸ್ಗಳು ಬಂದರೆ ಈ ಎರಡೂ ರೂಟ್ಗಳ ನಡುವಣ ಕೆಲವೇ ನಿಲುಗಡೆಯೊಂದಿಗೆ ಸೂಪರ್ ಫಾಸ್ಟ್ ಬಸ್ ಕಾರ್ಯಾಚರಣೆ ನಡೆಸಲಾಗುವುದು.-ರಾಜೇಶ್ ಶೆಟ್ಟಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು -ನವೀನ್ ಭಟ್ ಇಳಂತಿಲ