Advertisement

ಮಹಿಳಾ ಟಿ20: ಭಾರತಕ್ಕೆ 23 ರನ್‌ ಸೋಲು

01:00 AM Feb 07, 2019 | Team Udayavani |

ವೆಲ್ಲಿಂಗ್ಟನ್‌: ಪುರುಷರ ಪಂದ್ಯಕ್ಕೂ ಮೊದಲು ವೆಲ್ಲಿಂಗ್ಟನ್‌ನಲ್ಲೇ ನಡೆದ ಮೊದಲ ಮಹಿಳಾ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 23 ರನ್ನುಗಳಿಂದ ಭಾರತವನ್ನು ಸೋಲಿಸಿದೆ. ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ದಾಖಲೆಯ ಅರ್ಧ ಶತಕವೊಂದೇ ಭಾರತದ ಪಾಲಿನ ಖುಷಿಯ ಸಂಗತಿಯಾಗಿತ್ತು. 

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 4 ವಿಕೆಟಿಗೆ 159 ರನ್‌ ಗಳಿಸಿ ಸವಾಲೊಡ್ಡಿದರೆ, ಭಾರತ 19.1 ಓವರ್‌ಗಳಲ್ಲಿ 136 ರನ್ನಿಗೆ ಆಲೌಟ್‌ ಆಯಿತು. ಭಾರತದ ಸರದಿಯಲ್ಲಿ ಮಂಧನಾ 58, ಜೆಮಿಮಾ 39 ಹೊರತುಪಡಿಸಿದರೆ ಉಳಿದವರ್ಯಾರಿಗೂ ಕಿವೀಸ್‌ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next