ಚಿಂತಾಮಣಿ: ಯಾವುದೇ ಸಮುದಾಯ, ಕುಟುಂಬ ಅಭಿವೃದ್ಧಿಯಾಗ ಬೇಕಾದರೆಆಸಮುದಾಯ ಮತ್ತು ಕುಟುಂಬದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಇಂದಿನ ಅತ್ಯಗತ್ಯ ಎಂದು ಸರ್ಕಾರಿ ಮಹಿಳಾಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಅಭಿಪ್ರಾಯಪಟ್ಟರು.
ತಾಲೂಕಿನ ಮುರುಗಮಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸದ ಅಡಿಯಲ್ಲಿನ ಮಹಿಳೆಯರು ಮತ್ತು ಆರ್ಥಿಕ ದುಡಿಮೆಗಳು ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವ ಅತ್ಯಗತ್ಯತೆ ಹಿಂದಿಗಿಂತ ಇಂದು ಮುಖ್ಯವಾಗಿದೆ. ಮಹಿಳೆ ಅಡುಗೆ ಕೆಲಸಕ್ಕೆ ಸೀಮತವಾಗದೇ ಹಲವು ಬಗೆಯ ಕೌಶಲ್ಯಗಳನ್ನುಬೆಳೆಸಿಕೊಂಡುವಿವಿಧಆರ್ಥಿಕವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಹಾಗೂ ಧರ್ಮಸ್ಥಳ ಯೋಜನೆಯಿಂದ ಸಿಗುವ ಸಾಲ ಸೌಲಭ್ಯಗಳನ್ನು ಬಳಸಿ ಕೊಂಡು ಸಣ್ಣ ಪ್ರಮಾಣದ ಹಲವು ಉದ್ಯಮಗಳನ್ನು ಪ್ರಾರಂಭಿಸಿಆರ್ಥಿಕಪ್ರಗತಿ ಕಾಣಬಹುದಾಗಿದೆಎಂದರು.
ತರಬೇತಿ: ಬ್ಯೂಟೀಷಿಯನ್, ಕುಸುರಿ, ಬಟ್ಟೆ ಹೊಲಿಗೆ, ಅಡಿಕೆ ತಟ್ಟೆ ತಯಾರಿಕೆ, ಊಟದ ತಟ್ಟೆ ತಯಾರಿಕೆ, ಗಾರ್ಮೆಂಟ್ಸ್, ಕೋಳಿ, ಕುರಿ ಸಾಕಾಣಿಕೆ, ತಿಂಡಿಗಳ ತಯಾರಿಕೆ ಹೀಗೆ ಹಲವು ಉದ್ಯಮಗಳನ್ನು ಮಾಡಬಹುದು. ರುಡ್‌ಸೆಟ್ ಮೂಲಕ ಉಚಿತ ತರಬೇತಿ ಪಡೆಯಬಹುದು ಎಂದರು. ಯೋಜನೆಯ ತಾಲೂಕು ಸಮನ್ವಯಾಧಿಕಾರಿ ಉಷಾರಣಿ ಮಾತನಾಡಿ, ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಹಲವು ಕಸುಬುಗಳನ್ನು ಮಾಡಲು ಆರ್ಥಿಕವಾಗಿ ಸದೃಢರಾಗಲು1.5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು. ಎಸ್.ಕೆ.ಡಿ.ಆರ್ .ಪಿ.ಯೋಜನೆಯ ಮುರುಗಮಲೆ ಸಂಘದ ಉಪಾಧ್ಯಕ್ಷೆ ರೆಡ್ಡಮ್ಮ, ವೆಂಕಟಲಕ್ಷ್ಮಮ್ಮ, ಸೇವಾ ಪ್ರತಿನಿಧಿ ಪ್ರೇಮ ಕುಮಾರಿ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.