Advertisement

ದ್ರಾವಿಡ್‌ ಮನೆಯಲ್ಲೇ ತಂಗಲು ಬಂದ ವನಿತಾ ಕ್ರಿಕೆಟ್‌ ಅಭಿಮಾನಿ

08:20 AM May 05, 2020 | Sriram |

ಬೆಂಗಳೂರು: ಕ್ರಿಕೆಟಿನ ಕ್ರೇಜಿ ಅಭಿಮಾನಿಗಳಿಗೆ ಲೆಕ್ಕವಿಲ್ಲ. ಇವರು ನೀಡುವ ಕಾಟವಂತೂ ಕೆಲವೊಮ್ಮೆ ವಿಪರೀತವಾಗಿರುತ್ತದೆ. ಇದಕ್ಕೆ ಗೋಡೆ ಖ್ಯಾತಿಯ ರಾಹುಲ್‌ ದ್ರಾವಿಡ್‌ ಕೂಡ ಹೊರತಾಗಿರಲಿಲ್ಲ. ಈ ಲಾಕ್‌ಡೌನ್‌ ಸಮಯದಲ್ಲಿ ಅವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

Advertisement

ಇದು ವನಿತಾ ಅಭಿಯಾನಿಯೊಬ್ಬರ ಕಥಾ ಪ್ರಸಂಗ. ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದ ಸಮಯವದು. ಆಗಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದಿದ್ದ ದ್ರಾವಿಡ್‌ ಅಪರಾಹ್ನದ ಹೊತ್ತಿನಲ್ಲಿ ಗಡದ್ದಾಗಿ ನಿದ್ದೆ ಮಾಡುತ್ತಿದ್ದರು. ಅದೇ ವೇಳೆ ಅವರ ಮನೆಗೆ ಹೈದರಾಬಾದ್‌ನಿಂದ ಓರ್ವ ವನಿತಾ ಅಭಿಮಾನಿಯ ಪ್ರವೇಶವಾಗುತ್ತದೆ. ಅಮ್ಮ ಬಂದು ವಿಷಯ ತಿಳಿಸುತ್ತಾರೆ. ಆಕೆ ಬಂದು ಒಂದೂವರೆ ಗಂಟೆ ಆಯಿತು ಎಂಬುದಾಗಿಯೂ ಹೇಳುತ್ತಾರೆ.

ಬಹುಶಃ ಇದು ಆಟೋಗ್ರಾಫ್, ಫೋಟೊ ಹುಚ್ಚಿನ ಮಾಮೂಲು ಫ್ಯಾನ್‌ ಆಗಿರಬೇಕೆಂದು ಭಾವಿಸಿದ ದ್ರಾವಿಡ್‌ ಎದ್ದು ಹೋಗುತ್ತಾರೆ. ಇದೆಲ್ಲ ಮುಗಿದರೂ ಆಕೆ ಎದ್ದು ಹೋಗುವ ಸೂಚನೆ ಕಾಣಲಿಲ್ಲ. “ನಾನು ಮನೆ ಬಿಟ್ಟು ಬಂದಿದ್ದೇನೆ. ಇಲ್ಲಿಯೇ ಉಳಿಯುತ್ತೇನೆ’ ಎಂಬುದು ಆಕೆಯ ಹಠವಾಗಿತ್ತು!

ಇದೊಳ್ಳೆ ಗ್ರಹಚಾರವಾಯಿತಲ್ಲ ಎಂಬ ತೀರ್ಮಾನಕ್ಕೆ ಬಂದ ದ್ರಾವಿಡ್‌ ಪೊಲೀಸರಿಗೆ ವಿಷಯ ತಿಳಿಸುತ್ತಾರೆ. ಹೈದರಾಬಾದ್‌ನಲ್ಲಿರುವ ಆಕೆಯ ಹೆತ್ತವರಿಗೆ ಸುದ್ದಿ ಮುಟ್ಟಿಸಿ ಸಮಸ್ಯೆಯನ್ನು ಪರಿಹರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next