Advertisement

ಪ್ರತ್ಯೇಕವಾಗಿದ್ದರೆ ಮಾತ್ರ ಶಿಕ್ಷಣ ವ್ಯವಸ್ಥೆ 

10:57 PM Sep 12, 2021 | Team Udayavani |

ಕಾಬೂಲ್‌: ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪ್ರತ್ಯೇಕ­ವಾಗಿ ಕುಳಿತು­ಕೊಳ್ಳಲು ಅವಕಾಶ­ವಿರುವ ವಿವಿಗಳಲ್ಲಿ ಮಾತ್ರ ಅಫ್ಘಾನ್‌ ಮಹಿಳೆಯರು ಶಿಕ್ಷಣ ಕೈಗೊಳ್ಳಬಹುದು ಎಂದು ಅಫ್ಘಾನಿ­ಸ್ಥಾನದ ಉನ್ನತ ಶಿಕ್ಷಣ ಸಚಿವ ಅಬ್ದುಲ್‌ ಬಕಿ ಹಕ್ಕಾನಿ ತಿಳಿಸಿದ್ದಾನೆ.

Advertisement

ರವಿವಾರ ಮಾತನಾ­ಡಿದ ಆತ ಅಫ್ಘಾನಿಸ್ಥಾನದ ಮಹಿಳೆಯರ ಶಿಕ್ಷಣಕ್ಕಾಗಿ ರೂಪಿಸಲಾಗಿರುವ ಹೊಸ ನಿಯಮಾವಳಿಗಳನ್ನು ವಿವರಿಸಿದ್ದಾನೆ. “ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಕೂರಿಸಿ, ಮಧ್ಯದಲ್ಲಿ ಪರದೆ ಹಾಕಿರುವ ವ್ಯವಸ್ಥೆ ಇರುವ ಕಡೆಯಲ್ಲಿ ಮಾತ್ರ ವ್ಯಾಸಂಗ ಮಾಡಬಹುದು. ಪದವಿ ಮಾತ್ರವಲ್ಲದೆ ಸ್ನಾತಕೋತ್ತರ ವಿಷಯಗಳಲ್ಲೂ ಮಹಿಳೆಯರು ವ್ಯಾಸಂಗ ಮಾಡಬಹುದು. ವಿದ್ಯಾರ್ಥಿನಿಯರು ಕಡ್ಡಾಯವಾಗಿ ಹಿಜಾಬ್‌ ಧರಿಸಲೇಬೇಕು’ ಎಂದಿದ್ದಾರೆ.

ಪೊಲೀಸರು ಸೇವೆಗೆ ಪುನರಾಗಮನ: ಕಾಬೂಲ್‌ನ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಸೇವೆಯಲ್ಲಿದ್ದ ಪೊಲೀಸ್‌ ಸಿಬಂದಿ, ರವಿವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಾಲಿಬಾನಿಗಳು ಕಾಬೂಲನ್ನು ಆಕ್ರಮಣ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರೆಲ್ಲರೂ ವಿಮಾನ ನಿಲ್ದಾಣ ತೊರೆದಿದ್ದರು.

ಪಾಕಿಗಳ ಬೆಂಬಲ:

ಅಫ್ಘಾನಿಸ್ಥಾನದಲ್ಲಿ ತಾಲಿ­ಬಾನಿಗಳ ಸರಕಾರ ಅಸ್ತಿತ್ವಕ್ಕೆ ಬಂದಿರು­ವುದನ್ನು ಪಾಕ್‌ ಜನರು ಸ್ವಾಗತಿಸಿದ್ದಾರೆ.  “ಗಾಲ್‌ಅಪ್‌ ಪಾಕಿ­ಸ್ಥಾನ’ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಪಾಕಿಸ್ಥಾನದ ಜನರಲ್ಲಿ ಶೇ. 55ರಷ್ಟು ಮಂದಿ ತಾಲಿಬಾನಿ ಆಡಳಿತಕ್ಕೆ ಬೆಂಬಲ ಸೂಚಿಸಿದ್ದರೆ,  ಉಗ್ರ ಆಡಳಿತಕ್ಕೆ ಶೇ. 25 ಜನ ಬೇಸರ ವ್ಯಕ್ತಪಡಿಸಿದ್ದಾರೆ. ಶೇ. 20 ಮಂದಿ ಪ್ರತಿಕ್ರಿಯೆ ನೀಡಿಲ್ಲ.   ಖೈಬರ್‌ ಪಕು¤ಂಖ್ವಾದಲ್ಲಿ ಹೆಚ್ಚಿನ­ವರು ತಾಲಿಬಾನ್‌ ಆಡಳಿತಕ್ಕೆ ದೊಡ್ಡಮಟ್ಟದ ಬೆಂಬಲ ವ್ಯಕ್ತ­ಪಡಿ­ಸಿದ್ದಾರೆ.

Advertisement

ಸಾಮೂಹಿಕ ಕ್ಷಮಾದಾನ :

ಹಿಂದಿನ ಅಫ್ಘಾನ್‌ ಸರಕಾರದಲ್ಲಿ ಸೇವೆ ಸಲ್ಲಿಸಿರುವ ಎಲ್ಲ ಸರಕಾರಿ ನೌಕರಿಗೆ ಸಾಮೂ ಹಿಕ ಕ್ಷಮಾದಾನವನ್ನು ನೀಡಿರುವುದಾಗಿ ತಾಲಿಬಾನ್‌ ಸರಕಾರ ಘೋಷಿಸಿದೆ. ಸೇನೆ, ಪೊಲೀಸ್‌ ಹಾಗೂ ಇನ್ನಿತರ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next