ಉಡುಪಿ : ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಮಾಡಿದ ತಪ್ಪಿಗೆ ದಂಡ ಹಾಕಲು ಹೇಳಿದ ಕಾರಣಕ್ಕಾಗಿ ಟ್ರಾಫಿಕ್ ಎಸ್ ಐಗೆ ಆವಾಜ್ ಹಾಕಿರುವ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ.
ಕಾರು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತಾನಾಡುತ್ತಾ ಹೋದ ಮಹಿಳೆಯನ್ನು ತಡೆದು, ಕಾರು ಬದಿಗೆ ನಿಲ್ಲಿಸಿ ಫೋನಿನಲ್ಲಿ ಮಾತಾಡಿಕೊಂಡು ಹೋಗಿ ಎಂದು ಟ್ರಾಪಿಕ್ ಎಸ್ ಐ ಅಬ್ದುಲ್ ಖಾದರ್ ಸೂಚಿಸಿದ್ದಾರೆ. ಈ ವೇಳೆ ಮಾಡಿದ ತಪ್ಪಿಗೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್ ಎಸ್ ಐಗೆ ಮಹಿಳೆ ಅವಾಜ್ ಹಾಕಿದ್ದಾರೆ .
ಟ್ರಾಫಿಕ್ ಪೊಲೀಸ್ ರೊಂದಿಗೆ ಮಾತಾನಾಡುವ ವೇಳೆ,ಇತರರು ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಇದಕ್ಕೆ ಮಹಿಳೆ ಗರಂ ಆಗಿ, ಚಿತ್ರೀಕರಿಸುವುದನ್ನು ನಿಲ್ಲಿಸಿ, ಅಧಿಕಾರ ಇದೆಯೆಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಿರಿ. ಗೂಗಲ್ ಪೇ ಹೇಳಿ ದುಡ್ಡು ಕಟ್ಟಿ ಹೋಗುತ್ತೇನೆ. ಮತ್ತೆ ಫೋನಿನಲ್ಲಿ ಮಾತಾಡಿಕೊಂಡು ಹೋಗುತ್ತೇನೆ ಎಂದು ದಂಡ ಕಟ್ಟಿ ಗೊಣಗುತ್ತ ಹೋಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಎಮರ್ಜೆನ್ಸಿ ಲಾಕ್ ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಅನಗತ್ಯವಾಗಿ ತಿರುಗಾಡುವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರಸ್ತೆ ನಿಯಮ ಉಲ್ಲಂಫಿಸಿದರೆ ಸುಮ್ಮನೆ ಇರುವುದಿಲ್ಲ ಎಂದು ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ಹೇಳಿದ್ದಾರೆ.