ಪಡುಬಿದ್ರಿ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಗಳಾಗಿದ್ದಾರೆ. ಸೇನೆಯಲ್ಲೂ ಭಾರತೀಯ ಮಹಿಳೆಯರು ಉನ್ನತ ಸ್ಥಾನದಲ್ಲಿರುವರು. ಧೈರ್ಯವಂತ ಮಹಿಳೆಯರಿಗಷ್ಟೇ ಇಂತಹಾ ಅವಕಾಶಗಳು ಅರಸಿ ಬರುತ್ತವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿರಿ ಎಂದು ಬಾರತೀಯ ಸೇನಾ ನಿವೃತ್ತ ಕಮಾಂಡರ್, ಕಾರವಾರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕಿ ಇಂದುಪ್ರಭಾ ಹೇಳಿದ್ದಾರೆ.
ಅವರು ಮಾ. 12ರಂದು ಪಡುಬಿದ್ರಿ ಲಯನ್ಸ್ ಮತ್ತು ಲಯನೆಸ್ ಕ್ಲಬ್, ಪಡುಬಿದ್ರಿ ಬಿಲ್ಲವ ಸೇವಾ ಸಂಘದ ಮಹಿಳಾ ವಿಭಾಗ, ಸ್ತಿÅರೋಗ ಮತ್ತು ಪ್ರಸೂತಿ ತಜ್ಞರ ಸೊಸೈಟಿ ಮಂಗಳೂರು ಮತ್ತು ಕಂಕನಾಡಿಯ ಫಾ | ಮುಲ್ಲರ್ ಆಸ್ಪತ್ರೆಯ ನುರಿತ ವೈದ್ಯೆಯರ ಸಹಕಾರದೊಂದಿಗೆ ಪಡುಬಿದ್ರಿಯ ಪ್ರಾ. ಆ. ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಹಿಳಾ ದಿನಚಾರಣೆಯ ಅಂಗವಾಗಿ ತನಗೆ ನೀಡಲಾದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಡುಬಿದ್ರಿಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷೆ ಸುಧಾ ಆರ್. ನಾವಡ ಮಾತಾಡಿದರು. ಮುಖ್ಯ ಅತಿಥಿಗಳಾಗಿದ್ದ ಪಡುಬಿದ್ರಿಯ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ | ಬಿ. ಬಿ. ರಾವ್, ಸ್ತಿÅ ರೋಗ ತಜ್ಞೆ ಡಾ | ಪ್ರಜ್ಞಾ ವೀರೇಂದ್ರ ಹಾಗೂ ಪಡುಬಿದ್ರಿ ಬಿಲ್ಲವರ ಸಂಘದ ಅಧ್ಯಕ್ಷ ವೈ. ಸುಧೀರ್‌ಕುಮಾರ್ ಶಿಬಿರದ ಪ್ರಯೋಜನವನ್ನು ಮಹಿಳೆಯರು ಹೆಚ್ಚಾಗಿ ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕಂಕನಾಡಿ ಫಾ | ಮುಲ್ಲರ್ನ ವೈದ್ಯೆಯರಾದ ಡಾ | ಪ್ರೇಮಾ ಡಿ”ಕುನ್ಹ, ಡಾ | ಚೇತನಾ ಭಟ್, ಪಡುಬಿದ್ರಿ ಲಯನೆಸ್ ಕ್ಲಬ್ಬಿನ ಅಧ್ಯಕ್ಷೆ ಸುಚರಿತಾ ಎನ್. ಅಂಚನ್, ಪಡುಬಿದ್ರಿ ಲಯನ್ಸ್ ಕಾರ್ಯದರ್ಶಿ ಭಾರ್ಗವಿ ಆಚಾರ್, ತಾ. ಪಂ. ಸದಸ್ಯೆ ನಿಂಚನ ವಂದಿಸಿದರು. àತಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸುಧಾ ಆರ್. ನಾವಡ ಸ್ವಾಗತಿಸಿದರು. ಲಯನೆಸ್ ಕ್ಲಬ್ ಕಾರ್ಯದರ್ಶಿ ಅನುರಾಧಾ ಜೆ. ಪಿ ನಿರ್ವಹಿಸಿದ ಈ ಸಭೆಯಲ್ಲಿ ಪಡುಬಿದ್ರಿ ಬಿಲ್ಲವರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಸಿ. ಅಂಚನ್ ವಂದಿಸಿದರು.