ವನಿತಾ ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಉಳಿದ ತಂಡಗಳೆಂದರೆ ಚೀನ, ಥಾಯ್ಲೆಂಡ್, ಆಸ್ಟ್ರೇಲಿಯ, ಜಪಾನ್, ದಕ್ಷಿಣ ಕೊರಿಯ, ಬ್ರಝಿಲ್, ಚಿಲಿ ಮತ್ತು ಸ್ಪೇನ್.
ಫ್ಲೋರೆನ್ಸ್: ಕಳೆದೆರಡು ದಶಕಗಳಲ್ಲಿ ಮೊದಲ ಬಾರಿಗೆ ಇಟೆಲಿ ವನಿತಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಸಂಪಾದಿಸಿತು…
ಕ್ರೀಡಾಪ್ರಿಯರೆಲ್ಲ ಜೂ. 14ರಿಂದ ಆರಂಭವಾಗಲಿರುವ ಪುರುಷರ ವಿಶ್ವಕಪ್ ಫುಟ್‌ಬಾಲ್‌ನತ್ತ ವಿಪರೀತ ಆಸಕ್ತಿ ತೋರುತ್ತಿರುವಾಗ ಇದೇನಿದು ದಿಢೀರನೇ ವನಿತಾ ವಿಶ್ವಕಪ್ ಫುಟ್‌ಬಾಲ್ ಎಂದು ಅನೇಕರು ಹುಬ್ಬೇರಿಸಬಹುದು.
ಆದರೆ ವನಿತೆಯರಿಗೂ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ಇದರಲ್ಲೂ ಪುರುಷರಂತೆ 32 ತಂಡಗಳು ಗ್ರೂಪ್ ಮಾದರಿಯಲ್ಲಿ ಸೆಣಸಲಿವೆ. ಬಳಿಕ ನಾಕೌಟ್, ಸೆಮಿಫೈನಲ್, ಫೈನಲ್… ಹೀಗೆ ವಿಶ್ವವಿಜೇತರನ್ನು ನಿರ್ಧರಿಸಲಾಗುತ್ತದೆ. ಅಭಿಮಾನಿಗಳಿಗೆ ಭರ್ತಿ ಒಂದು ತಿಂಗಳು ಕಾಲ್ಚೆಂಡಿನ ರಸದೌತಣ ಲಭಿಸಲಿದೆ.
ಅಂದಹಾಗೆ ಮುಂದಿನ ವನಿತಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ 2019ರ ಜೂನ್ 7ರಿಂದ ಜುಲೈ 7ರ ತನಕ ಫ್ರಾನ್ಸ್‌ನಲ್ಲಿ ಸಾಗಲಿದೆ. ಅಂದರೆ, ಮುಂದಿನ ವರ್ಷ ಇದೇ ಹೊತ್ತಿಗೆ ವನಿತಾ ವಿಶ್ವಕಪ್ ಫುಟ್‌ಬಾಲ್ ಕೂಟದ ಕಾವೇರಲಿದೆ!
ಇದು 8ನೇ ವನಿತಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ. ಫ್ರಾನ್ಸ್ ಮೊದಲ ಸಲ ಇದರ ಆತಿಥ್ಯ ವಹಿಸಲಿದೆ. ಫ್ರಾನ್ಸ್ ಸಹಿತ 10 ತಂಡಗಳು ಈಗಾಗಲೇ ಅರ್ಹತೆ ಪಡೆದಾಗಿದೆ.
ಅರ್ಹತೆ ಗಳಿಸಿದ ಇಟಲಿ
ಇದಕ್ಕೆ ನೂತನವಾಗಿ ಸೇರ್ಪಡೆಗೊಂಡ ತಂಡವೇ ಇಟಲಿ. ಯುಎಫ್ಎಫ್ಎ ಅರ್ಹತಾ ಪಂದ್ಯಾವಳಿಯ “ಗ್ರೂಪ್ 6’ನಲ್ಲಿ ಎಲ್ಲ 7 ಪಂದ್ಯಗಳನ್ನು ಜಯಿಸುವ ಮೂಲಕ ಇಟೆಲಿ ಈ ಅರ್ಹತೆ ಸಂಪಾದಿಸಿತು. ಕೊನೆಯ ಪಂದ್ಯದಲ್ಲಿ ಅದು ಪೋರ್ಚುಗಲ್‌ಗೆ 3-0 ಆಘಾತವಿಕ್ಕಿತು.