Advertisement

ಕೋಣೆಯನ್ನು ಕೆಡವಿ ಶೌಚಗೃಹ ಕಟ್ಟಿದ ಮಹಿಳೆ!

08:00 AM Oct 14, 2017 | Team Udayavani |

ಬೈಲಹೊಂಗಲ: ಮನೆಯಂಗಳದಲ್ಲಿ ಸಾಕಷ್ಟು ಜಾಗವಿದ್ದರೂ ಶೌಚಾಲಯ ನಿರ್ಮಿಸಿಕೊಳ್ಳಲು ಅಸಡ್ಡೆ ತೋರುವ ಜನಗಳ ನಡುವೆ ಮಹಿಳೆಯೊಬ್ಬರು ಮನೆಯ ಮುಖ್ಯ ಕೋಣೆಯನ್ನು ಕೆಡವಿ ಶೌಚಾಲಯ ನಿರ್ಮಿಸಿ ಆದರ್ಶ ಮೆರೆದಿದ್ದಾರೆ. ತಾಲೂಕಿನ
ಅನಿಗೋಳ ಗ್ರಾಮದ ಫಕೀರವ್ವ ಯಮನಪ್ಪ ಇಂಗಳಗಿ ಬಡವಳಾಗಿದ್ದಳೂ ಸ್ವತ್ಛ ಭಾರತ ಅಂದೋಲನ ಕಾರ್ಯಕ್ರಮವನ್ನು ಮೆಚ್ಚಿ ಶೌಚಾಲಯ ನಿರ್ಮಿಸಿ ಕೊಂಡು ಮಾದರಿಯಾಗಿದ್ದಾರೆ. ಇಂಥ ಮಹಿಳೆ ಇತರರಿಗೂ ಆದರ್ಶವಾಗಿದ್ದು, ಮಾದರಿ ಸಮಾಜ ನಿರ್ಮಾಣಗೊಂಡು ದೇಶದ ಅಭಿವೃದಿಟಛಿ ಸಾಧ್ಯ ಎಂದು ಜಿಪಂ ಸಿಇಒ ಆರ್‌. ರಾಮಚಂದ್ರನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಸಾರ್ವಜನಿಕರಿಗೆ ಶೌಚಾಲಯ ಬಗ್ಗೆ ಮಾಹಿತಿ ನೀಡಿದರೆ ಕಟ್ಟಲು ಜಾಗವಿಲ್ಲ ಎಂದು ನೆಪ ಹೇಳುವ ಜನ ಹೆಚ್ಚು. ಆದರೆ ಗ್ರಾಮದ ಮಹಿಳೆ ಮನೆಯ ಒಂದು ಭಾಗ ಕೆಡವಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅನಿಗೋಳ ಗ್ರಾಪಂ ಅಧ್ಯಕ್ಷ ರಮೇಶ ಪರಮಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next