Advertisement

ಬುರ್ಜ್ ಖಲೀಫಾ ದ ತುತ್ತ ತುದಿಯಲ್ಲಿ ನಿಂತ ಗಗನಸಖಿ ; ಕಾರಣ ಏನು ಗೊತ್ತಾ?

12:33 PM Aug 10, 2021 | Team Udayavani |

ದುಬಾಯಿ ; ಜಗತ್ತಿನ ಅತೀ ಎತ್ತರದ ಕಟ್ಟಡ ಎಂದೇ ಖ್ಯಾತಿ ಪಡೆದ ಬುರ್ಜ್ ಖಲೀಫಾ ಕಟ್ಟಡದ ತುತ್ತ ತುದಿಯಲ್ಲಿ ಗಗನಸಖಿಯೊಬ್ಬರು ನಿಂತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ಬುರ್ಜ್ ಖಲೀಫಾ ಕಟ್ಟಡ 828 ಮೀಟರ್ ಎತ್ತರವಿದ್ದು ಇದರ ತುತ್ತ ತುದಿಯಲ್ಲಿ ಗಗನಸಖಿಯೊಬ್ಬಳು ನಿಂತ ವಿಡಿಯೋ ನೋಡುಗರನ್ನು ಭಯಭೀತಿಗೊಳಿಸುವುದು ಸುಳ್ಳಲ್ಲ, ಅಸಲಿಗೆ ಆ ಗಗನಸಖಿ ಯಾರು ಯಾಕಾಗಿ ಈ ಕಟ್ಟಡದ ತುತ್ತ ತುದಿಯಲ್ಲಿ ನಿಂತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ…

ಯುಎಇ ಯಾ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ಸಂಸ್ಥೆಯ ಜಾಹೀರಾತಿಗಾಗಿ ದುಬಾಯಿಯ ಬುರ್ಜ್ ಖಲೀಫಾ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದು 30 ಸೆಕುಂಡುಗಳ ಜಾಹಿರಾತಿನಲ್ಲಿ ಎಮಿರೇಟ್ಸ್ ಸಂಸ್ಥೆಯ ಗಗನಸಖಿ ತನ್ನ ಸಂಸ್ಥೆಯ ಜಾಹಿರಾತನ್ನು ಪ್ರದರ್ಶಿಸುವ ಚಿತ್ರೀಕರಣವನ್ನು ಮಾಡಲಾಗಿದೆ.

ನಿಕೋಲ್ ಸ್ಮಿತ್-ಲುಡ್ವಿಕ್ ಅವರೇ ಈ ವಿಡಿಯೋದಲ್ಲಿ ಕಾಣುವ ಯುವತಿಯಾಗಿದ್ದು ಇದಕ್ಕಾಗಿ ನುರಿತ ತಜ್ಞರ ಮಾರ್ಗದರ್ಶನದಲ್ಲಿ ಸಾಕಷ್ಟು ದಿನಗಳಿಂದ ಅಭ್ಯಾಸ ನಡೆಸಿದ್ದಾರೆ.

Advertisement

ಇದನ್ನೂ ಓದು :13 ತಿಂಗಳುಗಳ ನಂತರ ಆಸ್ಪತ್ರೆಯಿಂದ ಮನೆ ತಲುಪಿದ ಆ್ಯಪಲ್ ತೂಕದ ಮಗು..!

ಕಟ್ಟಡದ ತುತ್ತ ತುದಿಯಲ್ಲಿ ಕೇವಲ 1.2 ಮೀಟರ್ ನಷ್ಟು ಮಾತ್ರ ಜಾಗವಿದ್ದು ಇಲ್ಲಿ ಗಾಳಿಯ ಒತ್ತಡಕ್ಕೆ ಹೊಂದಿಕೊಂಡು ನಿಲ್ಲಬೇಕಾಗಿದೆ. ಹಾಗಾಗಿ ಕೆಲವು ದಿನಗಳ ಅಭ್ಯಾಸದಿಂದ ಈ ಜಾಹಿರಾತು ಚಿತ್ರೀಕರಣ ಮಾಡಲಾಗಿದೆ.

ಚಿತ್ರೀಕರಣದ ಕುರಿತು ನಿಕೋಲ್ ಸ್ಮಿತ್-ಲುಡ್ವಿಕ್ ಹೇಳುವಂತೆ ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ, ಜೀವಮಾನದಲ್ಲಿ ಈ ರೀತಿಯ ಸಾಹಸ ನಾನು ಮಾಡಿಲ್ಲ ಎಂದಿದ್ದಾರೆ.

ಇಲ್ಲಿ ನೈಜ್ಯವಾಗಿ ಚಿತ್ರೀಕರಣ ಮಾಡಲಾಗಿದ್ದು , ಯಾವುದೇ ರೀತಿಯ ತಂತಜ್ಞಾನವನ್ನು ಬಳಕೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next